ಪ್ರಣವ್ ಮುಖರ್ಜಿಯ ತಿರುಚಿದ ಫೋಟೋ ವೈರಲ್: ಆರೆಸ್ಸೆಸ್ ಪ್ರತಿಕ್ರಿಯಿಸಿದ್ದು ಹೀಗೆ…

ಹೊಸದಿಲ್ಲಿ, ಜೂ.8: ನಾಗ್‌ಪುರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಂಘ ಗೀತೆ ಪಠಣದ ಸಂದರ್ಭ ಸ್ವಯಂಸೇವಕರ ಶೈಲಿಯಲ್ಲಿಯೇ ನಮಿಸುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಹತಾಶ ಶಕ್ತಿಗಳ ಹೀನ ಕೃತ್ಯವಾಗಿದೆ ಎಂದು ಆರೆಸ್ಸೆಸ್ ಖಂಡಿಸಿದೆ.
ಕೆಲವು ವಿಚ್ಛಿದ್ರಕಾರಿ ರಾಜಕೀಯ ಪಕ್ಷಗಳು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಆರೆಸ್ಸೆಸ್ ಸಂಘ ಗೀತೆ ಪಠಣ ಸಂದರ್ಭ ಸೆಲ್ಯೂಟ್ ಹೊಡೆಯುವ ನಕಲಿ ಫೋಟೋ ಪೋಸ್ಟ್ ಮಾಡಿವೆ. ಆರೆಸ್ಸೆಸ್‌ನ ಹೆಸರು ಕೆಡಿಸಲು ಈ ಹತಾಶ ಶಕ್ತಿಗಳು ಇಂತಹ ಕೃತ್ಯಗಳನ್ನು ಮಾಡುತ್ತಲೇ ಇರುತ್ತವೆ ಎಂದು ಆರೆಸ್ಸೆಸ್ ತಿಳಿಸಿದೆ.
ಇದಕ್ಕೂ ಮೊದಲು, ಈ ಪೋಟೋದ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಣವ್ ಮುಖರ್ಜಿ ಪುತ್ರಿ ಹಾಗೂ ದಿಲ್ಲಿ ಕಾಂಗ್ರೆಸ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ಶರ್ಮಿಷ್ಠಾ ಮುಖರ್ಜಿ, ಬಲಪಂಥೀಯ ಸಂಘಟನೆಗಳ ಕೊಳಕು ಕೃತ್ಯದ ವಿಭಾಗದವರು ತಮ್ಮ ಕೆಲಸವನ್ನು ಭಾರೀ ಉತ್ಸಾಹದಿಂದ ನಿರ್ವಹಿಸುತ್ತಿದ್ದಾರೆ ಎಂದು ಟೀಕಿಸಿದ್ದರು.
Next Story





