ಮಂಗಳಾದೇವಿ ದೇವಸ್ಥಾನ ಬಳಿ ಮರದ ಟೊಂಗೆ ಬಿದ್ದು ನಾಲ್ವರಿಗೆ ಗಾಯ

ಮಂಗಳೂರು, ಜೂ. 8: ನಗರದ ಮಂಗಳಾದೇವಿ ದೇವಸ್ಥಾನ ಎದುರಿನ ಮರದ ಟೊಂಗೆವೊಂದು ಬಿದ್ದು ನಾಲ್ವರಿಗೆ ಗಾಯವಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮಾರ್ನಮಿಕಟ್ಟೆಯ ಸುರೇಖಾ ಶೆಟ್ಟಿ (53), ನಂದಿಗುಡ್ಡ ನಿವಾಸಿ ಪ್ರಮೀಳಾ ಸುವರ್ಣ (49), ಜಪ್ಪು ಕುಟ್ಪಾಡಿಯ ನವಿನ್ ಮಡಿವಾಳ (45) ಹಾಗೂ ಮಾರ್ನಮಿಕಟ್ಟೆಯ ತೇಜಸ್ವಿನಿ (20) ಗಾಯಗೊಂಡವರು.
ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ದೇವಸ್ಥಾನದ ಎದುರಿನ ಅಶೋಕ ಮರದ ರೆಂಬೆಯೊಂದು ತುಂಡಾಗಿ ಬಿದ್ದಿದ್ದು, ಈ ಸಂದರ್ಭ ಅಲ್ಲಿದ್ದ ನಾಲ್ಕು ಮಂದಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಆ್ಯಕ್ಟಿವಾ ದ್ವಿಚಕ್ರ ವಾಹನವೊಂದಕ್ಕೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





