ಸಕಲೇಶಪುರ: ಮರ ಬಿದ್ದು ಕೂಲಿ ಕಾರ್ಮಿಕ ಮೃತ್ಯು

ಸಕಲೇಶಪುರ,ಜೂ.9: ಮಳೆಗೆ ಮರ ಬಿದ್ದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಯಸಳೂರು ಹೋಬಳಿಯ ಕಳಲೆ ಗ್ರಾಮದಲ್ಲಿ ನಡೆದಿದೆ.
ಪುಟ್ಟಯ್ಯ (65) ಮೃತಪಟ್ಟ ವ್ಯಕ್ತಿಯಾಗಿದ್ದು, ಗ್ರಾಮದ ರಾಮೇಗೌಡ ರವರ ತೋಟದ ಹತ್ತಿರ ಮಣ್ಣಿನ ರಸ್ತೆಯಲ್ಲಿ ಹೋಗುವ ಸಮಯದಲ್ಲಿ ಮಳೆ ಗಾಳಿಯಿಂದ ತೋಟದಲ್ಲಿ ಒಣಗಿದ ಮರ ಮುರಿದು ಬಿದ್ದು ಮೃತಪಟ್ಟಿದ್ದಾರೆ. ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
Next Story





