Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. "2019ರವರೆಗೆ ಪತ್ರಿಕೋದ್ಯಮ ನಡೆಸದಂತೆ...

"2019ರವರೆಗೆ ಪತ್ರಿಕೋದ್ಯಮ ನಡೆಸದಂತೆ ನನಗೆ ಒತ್ತಡ ಹೇರಲಾಗಿದೆ''

ಸಂದರ್ಶನದಲ್ಲಿ ಆಘಾತಕಾರಿ ವಿಷಯ ಬಹಿರಂಗಪಡಿಸಿದ ಬರ್ಖಾ ದತ್

ವಾರ್ತಾಭಾರತಿವಾರ್ತಾಭಾರತಿ9 Jun 2018 9:48 PM IST
share
2019ರವರೆಗೆ ಪತ್ರಿಕೋದ್ಯಮ ನಡೆಸದಂತೆ ನನಗೆ ಒತ್ತಡ ಹೇರಲಾಗಿದೆ

ಹೊಸದಿಲ್ಲಿ, ಜೂ.9: "ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳದಂತೆ ನನಗೆ ಆಡಳಿತದಲ್ಲಿರುವ ಪ್ರಭಾವಿ ವ್ಯಕ್ತಿಗಳಿಂದ ಪರೋಕ್ಷ ಬೆದರಿಕೆಗಳು ಹಾಗೂ ಸಂದೇಶಗಳು ಬರುತ್ತಿವೆ. ನಾನು ಮತ್ತು ನನ್ನ ಕುಟುಂಬ ಸಂಪೂರ್ಣ ನಿಗಾದಲ್ಲಿದೆಯೆಂದು ಸುಳಿವು ನೀಡಲಾಗಿದೆ" ಎಂದು ಖ್ಯಾತ ಪತ್ರಕರ್ತೆ ಬರ್ಖಾ ದತ್ ತಮ್ಮ ಸರಣಿ ಟ್ವೀಟ್ ಗಳ ಮೂಲಕ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಇಂದು ಸಂದರ್ಶನವೊಂದರಲ್ಲಿ ಮಾತನಾಡಿದ ದತ್, "ನನಗೆ ಬಿಜೆಪಿ ಸದಸ್ಯರೊಬ್ಬರು ಕರೆ ಮಾಡಿ 2019ರ ತನಕ ಪತ್ರಿಕೋದ್ಯಮ ನಡೆಸಬಾರದೆಂದು ಹಾಗೂ ಬೇರೇನಾದರೂ ಮಾಡುವಂತೆ ಸಲಹೆ ನೀಡಿದ್ದರು" ಎಂದು ಆನ್ ಲೈನ್ ವೀಡಿಯೋ ನ್ಯೂಸ್ ನೆಟ್ ವರ್ಕ್ 'ನ್ಯೂಸ್ ಕ್ಲಿಕ್'ಗಾಗಿ ಪರಂಜೋಯ್ ಗುಹಾ ಥಾಕುರ್ತ ಅವರಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಳೆದ ಒಂದೂವರೆ ವರ್ಷಗಳಲ್ಲಿ ತನ್ನನ್ನು ಹಲವು ಟಿವಿ ವಾಹಿನಿಗಳ ಪ್ರವರ್ತಕರು ಸಂಪರ್ಕಿಸಿ ಸಲಹೆಗಾರ್ತಿ ಅಥವಾ ಕಾರ್ಯಕ್ರಮ ನಿರೂಪಕಿ ಹುದ್ದೆ ಆಫರ್ ಮಾಡಿದ್ದರೂ ಪ್ರತಿ ಬಾರಿ ಅವರು ಸರಕಾರದ ಪ್ರತಿಕ್ರಿಯೆಗೆ ಹೆದರಿ ಹಿಂದೆ ಸರಿದಿದ್ದರು ಎಂದು ಬರ್ಖಾ ಹೇಳಿಕೊಂಡಿದ್ದಾರೆ. "ಸರಕಾರದ ಮತ್ತು ಪಕ್ಷದ ಅತಿ ಪ್ರಮುಖ ಇಬ್ಬರು ಮೂವರಿಗೆ ನಾನು ಇಷ್ಟವಿಲ್ಲ'' ಎಂದು ಟಿವಿ ವಾಹಿನಿಗಳ ಪ್ರವರ್ತಕರು ತನಗೆ ಹೇಳಿದ್ದರು ಎಂದೂ ಬರ್ಖಾ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

"ನಾನು ಹೊಸ ಟಿವಿ ವಾಹಿನಿ ಆರಂಭಿಸುವ ಬಗ್ಗೆ ವೆಬ್ ತಾಣವೊಂದು ವರದಿ ಮಾಡಿದ ನಂತರ ಬಿಜೆಪಿ ಜತೆ ಸಂಪರ್ಕವಿರುವ ತನ್ನ ಆತ್ಮೀಯ ಸ್ನೇಹಿತರೊಬ್ಬರು ನನ್ನನ್ನು ಭೇಟಿಯಾಗಿದ್ದರು. ಸರಕಾರದ ಮೇಲೆ ಪ್ರಭಾವ ಬೀರುವ ಪಕ್ಷದ ಒಂದು ವಿಭಾಗವು ಸಭೆ ನಡೆಸಿ 'ಆಕೆ ಟಿವಿಯಲ್ಲಿ  ಕಾಣಿಸಿಕೊಳ್ಳುವುದನ್ನು ತಡೆಯಲು ಏನು ಮಾಡುವುದು' ಎಂದು ಚರ್ಚಿಸಿತ್ತೆಂದು ಅವರು ನನಗೆ ತಿಳಿಸಿದ್ದರು. ನಾನು ಯಾರೊಂದಿಗಿದ್ದೇನೆ, ನನ್ನ ಬ್ಯಾಂಕ್ ಖಾತೆಯ ಮಾಹಿತಿ ಹೇಗೆ ಪಡೆಯುವುದು ಹಾಗೂ ನಾನು ಯಾರ ಜತೆ ಡೇಟಿಂಗ್ ಮಾಡುತ್ತೇನೆ ಎಂಬ ಪ್ರಶ್ನೆಗಳು ಸಭೆಯಲ್ಲಿ ಚರ್ಚಿತವಾಗಿದ್ದವು'' ಎಂದೂ ಬರ್ಖಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ನಾನೇನೂ ಸಂಪೂರ್ಣ ಪಕ್ಷವನ್ನು ದೂರುತ್ತಿಲ್ಲ, ಕೆಲ ಬಿಜೆಪಿ ಸದಸ್ಯರು ಕಳೆದ ಕೆಲ ತಿಂಗಳುಗಳಲ್ಲಿ ನನಗೆ ಸಂದರ್ಶನಗಳನ್ನು ನೀಡಿದ್ದಾರೆ" ಎಂದು ಹೇಳಿದ ಬರ್ಖಾ, "ಸರಕಾರ ಮತ್ತು ಮಾಧ್ಯಮವನ್ನೇ ದೂರಬೇಕಾಗಿದೆ. ಮಾಧ್ಯಮ ರಂಗವು ಸರಕಾರಕ್ಕೆ ಎಷ್ಟೊಂದು ಭಯ ಪಡುತ್ತಿದೆ'' ಎಂಬುದು ಕಳವಳಕಾರಿ ವಿಚಾರ ಎಂದರು.

ತಾವು ಬೆದರಿಕೆಗಳ ಬಗ್ಗೆ ಪೊಲೀಸ್ ದೂರು ಏಕೆ ನೀಡಿಲ್ಲ ಎಂದು ಹಲವು ಟ್ವಿಟ್ಟರಿಗರು ಪ್ರಶ್ನಿಸಿದ್ದನ್ನು ಸಂದರ್ಶನದ ವೇಳೆ ಉಲ್ಲೇಖಿಸಿದ ಬರ್ಖಾ, "ನನಗೇನು ನೇರ ಬೆದರಿಕೆಗಳು ಬರುತ್ತಿಲ್ಲ. ಬದಲಾಗಿ ಕಪಟ ತಂತ್ರಗಾರಿಕೆಯ ಮೂಲಕ ಒತ್ತಡ ಹೇರಲಾಗುತ್ತಿದೆ. ಇಂತಹ ಬೆದರಿಕೆಗಳನ್ನು ಪತ್ತೆ ಹಚ್ಚಲು ಅಸಾಧ್ಯ ಹಾಗೂ ದೂರು ದಾಖಲಿಸುವುದು ಕಷ್ಟಕರ'' ಎಂದೂ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X