ಹೆಬ್ರಿ: ಮಲಗಿದ್ದಲ್ಲಿಯೇ ಹಸುಗೂಸು ಮೃತ್ಯು
ಹೆಬ್ರಿ, ಜೂ.9: ಹಾಲು ಕುಡಿದು ಮಲಗಿದ್ದ ಒಂದೂವರೆ ತಿಂಗಳ ಮಗುವೊಂದು ಮೃತಪಟ್ಟ ಘಟನೆ ಶಿವಪುರ ಗ್ರಾಮದ ಸೂರಿಮಣ್ಣು ಎಂಬಲ್ಲಿ ಜೂ.8ರಂದು ರಾತ್ರಿ ವೇಳೆ ನಡೆದಿದೆ.
ಜಾಖಂರ್ಡ್ ಮೂಲದ ಬಿಲಿಚದಾನ ಟೊಪ್ರೊ ಹಾಗೂ ಸರಿತಾ ದಂಪತಿ ಮಗು ಅಂಜಲೀನಾ ಮೃತ ದುದೈರ್ವಿ. ಸೂರಿಮಣ್ಣುವಿನ ವರ್ಗಿಸ್ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಈ ದಂಪತಿ ಅಲ್ಲಿಯೇ ರೂಮ್ನಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.
ರಾತ್ರಿ ಮಲಗಿದ್ದ ಮಗುವಿಗೆ ದೇಹವು ಮುಂಜಾನೆ ತಣ್ಣಗಾಗಿದ್ದು, ಹೆಬ್ರಿ ಸರಕಾರಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





