ಮಂಗಳೂರು: ಬಿಗ್ ಬಝಾರ್‌ನಲ್ಲಿ ಇಫ್ತಾರ್ ಕೂಟ

ಮಂಗಳೂರು, ಜೂ. 9: ನಗರದ ಪ್ರಖ್ಯಾತ ಶಾಪಿಂಗ್ ಮಾಲ್‌ಗಳಲ್ಲಿ ಒಂದಾದ ‘ಬಿಗ್ ಬಝಾರ್’ನಲ್ಲಿ ಶುಕ್ರವಾರ ಇಫ್ತಾರ್ ಕೂಟ ನಡೆಯಿತು. ರಮಝಾನ್‌ನ ಮಹತ್ವವನ್ನು ಸಾರುದ ದೃಷ್ಟಿಯಿಂದ ಗ್ರಾಹಕರು ಮತ್ತು ಸಿಬ್ಬಂದಿ ವರ್ಗಕ್ಕೆ ವರ್ಷಂಪ್ರತಿ ಆಯೋಜಿಸಿಕೊಂಡು ಬರಲಾಗುತ್ತಿರುವ ಈ ಇಫ್ತಾರ್ ಕೂಟದಲ್ಲಿ ಸಾಕಷ್ಟು ಸಂಖ್ಯೆಯ ಗ್ರಾಹಕರು ಪಾಲ್ಗೊಂಡಿದ್ದರು.
ಈ ಸಂದರ್ಭ ಬಿಗ್ ಬಝಾರ್‌ನ ಸ್ಟೋರ್ ಮ್ಯಾನೇಜರ್ ಮುತ್ತುಮಾರನ್, ಎಚ್‌ಆರ್ ಮ್ಯಾನೇಜರ್ ಶರತ್ ಕುಮಾರ್, ವಿಭಾಗೀಯ ವ್ಯವಸ್ಥಾಪಕ ಮುಹಮ್ಮದ್ ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.
Next Story





