ಮೈಸೂರು: ನವಜಾತ ಶಿಶುವಿನ ಮೃತದೇಹ ಪತ್ತೆ
ಮೈಸೂರು,ಜೂ.9: ಹೆಬ್ಬಾಳ 2 ನೇ ಹಂತದ ಕಸದ ಡಬ್ಬದ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ನಡೆದಿದೆ.
ಹೆಬ್ಬಾಳ 2ನೇ ಹಂತದ ಕಸದ ಡಬ್ಬದ ಬಳಿ ನಾಯಿಗಳು ಜೋರಾಗಿ ಕಿರುಚುತ್ತಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಸರಿಯಾಗಿ ಪರಿಶೀಲಿಸಿದಾಗ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಕೂಡಲೇ ಹೆಬ್ಬಾಳ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಹೆಬ್ಬಾಳ ಠಾಣೆಯ ಪೊಲೀಸರು ನವಜಾತ ಶಿಸುವಿನ ಮೃತದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
Next Story





