ಪುತ್ತೂರು: ಕಾಲೇಜು ವಿದ್ಯಾರ್ಥಿನಿ ನಾಪತ್ತೆ
ಪುತ್ತೂರು, ಜೂ. 9: ಕಾಲೇಜ್‌ನ ಶುಲ್ಕ ಪಾವತಿ ಬಗ್ಗೆ ವಿಚಾರಿಸಲೆಂದು ಕಾಲೇಜ್‌ಗೆ ತೆರಳಿದ್ದ ವಿದ್ಯಾರ್ಥಿನಿ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಶನಿವಾರ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.
ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಮುರ ಎಂಬಲ್ಲಿನ ನಿವಾಸಿ ದಿವಾಕರ ಆಚಾರ್ಯ ಎಂಬವರ ಪುತ್ರಿ ಶುಭಶ್ರೀ (19) ನಾಪತ್ತೆಯಾದ ವಿದ್ಯಾರ್ಥಿನಿ. ಇಲ್ಲಿನ ವಿವೇಕಾನಂದ ಕಾಲೇಜ್‌ನಲ್ಲಿ ಪ್ರಥಮ ವರ್ಷದ ಡಿಗ್ರಿ ಮುಗಿಸಿ ರಜೆಯಲ್ಲಿದ್ದ ಶುಭಶ್ರೀ ದ್ವಿತೀಯ ವರ್ಷದ ತರಗತಿಗೆ ಕಾಲೇಜು ಶುಲ್ಕ ಪಾವತಿಸುವ ಬಗ್ಗೆ ವಿಚಾರಿಸಲೆಂದು ಮನೆಯಲ್ಲಿ ತಿಳಿಸಿ ಕಾಲೇಜ್‌ಗೆ ತೆರಳಿದ್ದರು. ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಅವರ ತಾಯಿ ಜಯಂತಿ ಅವರು ನಗರ ಠಾಣೆಗೆ ದೂರು ನೀಡಿದ್ದಾರೆ. ನಗರ ಪೊಲೀಸರು ದೂರು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
Next Story





