ಕೋಡಿಂಬಾಡಿಯಲ್ಲಿ ರಸ್ತೆಗೆ ಉರುಳಿದ ವಿದ್ಯುತ್ ಕಂಬಗಳು: ಉಪ್ಪಿನಂಗಡಿ-ಪುತ್ತೂರು ರಸ್ತೆ ಸಂಚಾರಕ್ಕೆ ಅಡ್ಡಿ

ಉಪ್ಪಿನಂಗಡಿ, ಜೂ.10: ಇಂದು ಬೆಳಗ್ಗೆ ಮಳೆಯೊಂದಿಗೆ ಬೀಸಿದ ಗಾಳಿಗೆ ಮರವೊಂದು ಉರುಳಿ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಕೆಲವು ವಿದ್ಯುತ್ ಕಂಬಗಳು ಕೂಡಾ ಮರದೊಂದಿಗೆ ರಸ್ತೆಗಡ್ಡವಾಗಿ ಉರುಳಿದ್ದರಿಂದ ಉಪ್ಪಿನಂಗಡಿ-ಪುತ್ತೂರು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಇಲಾಖಾ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು.
ವಿದ್ಯುತ್ ಕಂಬಗಳು ಉರುಳಿದ್ದರಿಂದ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಮೊಟಕುಗೊಂಡಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅವ್ಯಾಹತ ಗಾಳಿಮಳೆಗೆ ಅಲ್ಲಲ್ಲಿ ದರೆ ಕುಸಿತ, ಮರಗಳು ಉರುಳಿ ಹಾನಿ ಅಪಾರ ಸಂಭವಿಸಿದೆ.
Next Story





