ಕಾಶ್ಮೀರ ಭಾರತದಲ್ಲಿರುವ ಭೂಪಟ ಮುದ್ರಿಸಿದ್ದ ಪಠ್ಯಪುಸ್ತಕಗಳಿಗೆ ಪಾಕ್ ನಿಷೇಧ

ಸಾಂದರ್ಭಿಕ ಚಿತ್ರ
ಲಾಹೋರ್, ಜೂ.10: ಕಾಶ್ಮೀರವು ಭಾರತದ ಭಾಗವೆಂದು ತೋರಿಸುವ ಭೂಪಟ ಮುದ್ರಿತವಾಗಿರುವುದಕ್ಕಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತದ ಖಾಸಗಿ ಶಾಲೆಗಳಿಗಾಗಿನ ಸಾಮಾಜಿಕ ಅಧ್ಯಯನ ಪಠ್ಯಪುಸ್ತಕಗಳನ್ನು ಪಾಕ್ ಸರಕಾರವು ನಿಷೇಧಿಸಿದೆ.
ಈ ಹಿನ್ನೆಲೆಯಲ್ಲಿ ಪಾಕ್ ಸರಕಾರದ ಅಧೀನಕ್ಕೊಳಪಟ್ಟ ಪಂಜಾಬ್ಪ್ರಾಂತದ ಪಠ್ಯವಿಷಯ ಹಾಗೂಪಠ್ಯಪುಸ್ತಕ ಮಂಡಳಿ (ಪಿಸಿಟಿಬಿ)ಯು, ಪಂಜಾಬ್ ಪ್ರಾಂತದ ಖಾಸಗಿ ಶಾಲೆಗಳು ಹಾಗೂ ಪ್ರಕಾಶಕರ ವಿರುದ್ಧ ಘೋರ ಪ್ರಮಾದವನ್ನು ಎಸಗಿದ ಆರೋಪದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದೆ.
ಖಾಸಗಿ ಶಾಲೆಗಳ ಗೋದಾಮುಗಳಲ್ಲಿರುವ ಈ ಪುಸ್ತಕಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆಯೂ ಪಂಜಾಬ್ ಪ್ರಾಂತದ ಎಲ್ಲಾ ಜಿಲ್ಲಾ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಪಿಸಿಟಿಬಿ ಸೂಚನೆ ನೀಡಿದೆ. ಪಾಕಿಸ್ತಾನದ ಖಾಸಗಿ ಶಾಲೆಗಳ ಎರಡನೆ, ನಾಲ್ಕನೆ, ಐದನೆ ಹಾಗೂ ಏಳು ಮತ್ತು ಎಂಟನೆಯ ತರಗತಿಯ ಸಾಮಾಜಿಕ ಅಧ್ಯಯನ ಪುಸ್ತಕದಲ್ಲಿ ಪಾಕಿಸ್ತಾನದ ಭೂಪಟಕ್ಕೆ ಸಂಬಂಧಿಸಿ ಆಕ್ಷೇಪಕಾರಿ ಹಾಗೂ ವಿವಾದಾತ್ಮಕ ಪ್ರಸ್ತಾವನೆಗಳಿವೆಯೆಂದು, ಪಿಸಿಟಿಬಿ ಅಧಿಸೂಚನೆಯಲ್ಲಿ ತಿಳಿಸಿದೆ.





