ಅಮೆರಿಕದಿಂದ ಜಗತ್ತಿನ ಅತಿ ವೇಗದ ಸೂಪರ್ ಕಂಪ್ಯೂಟರ್ ಸೃಷ್ಟಿ
5 ವರ್ಷಗಳ ಬಳಿಕ ದ್ವಿತೀಯ ಸ್ಥಾನಕ್ಕೆ ಸರಿದ ಚೀನಾ

ವಾಶಿಂಗ್ಟನ್,ಜೂ.10: ವಿಶ್ವದ ಅತಿ ವೇಗದ ಕಂಪ್ಯೂಟರ್‌ನ್ನು ನಿರ್ಮಾಣದಲ್ಲಿ ಅಮೆರಿಕವು ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.
ಅಮೆರಿಕದ ಇಂಧನ ಇಲಾಖೆಯ ಸ್ವಾಮ್ಯಕ್ಕೊಳಪಟ್ಟ ಓಕ್ ರಿಡ್ಜ್ ನ್ಯಾಶನಲ್ ಲ್ಯಾಬೊರೇಟರಿಯು, ತನ್ನ ನಿರ್ಮಿಸಿರುವ ‘ಸಮ್ಮಿಟ್’ ಸೂಪರ್‌ಕಂಪ್ಯೂಟರ್ ಸೆಕೆಂಡ್‌ಗೆ 200 ಪೆಟ್ಟಾಫ್ಲಾಫ್ಸ್ ವೇಗದಲ್ಲಿ ಕಾರ್ಯನಿರ್ವಹಿಸಬಲ್ಲದೆಂದು ಘೋಷಿಸಿದೆ. ಜಗತ್ತಿನ 630 ಕೋಟಿ ವ್ಯಕ್ತಿಗಳು ಒಂದು ಸೆಕೆಂಡ್ ಕೂಡಾ ಬಿಡದೆ ವರ್ಷವಿಡೀ ಏಣಿಕೆ ಮಾಡಬೇಕಾದುದನ್ನು ಅಂದರೆ ಸಮ್ಮಿಟ್ ಕಂಪ್ಯೂಟರ್ ಕೇವಲ ಒಂದು ಸೆಕೆಂಡ್‌ನಲ್ಲಿ ಏಣಿಕೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸಮ್ಮಿಟ್ ಕಂಪ್ಯೂಟರ್‌ಗೆ ಮುನ್ನ ಚೀನಾದ ಸನ್‌ವೇ ತಾಯಿಹು ಲೈಟ್ ಜಗತ್ತಿನ ಅತ್ಯಂತ ವೇಗದ ಕಂಪ್ಯೂಟರ್ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಸನ್‌ವೇ ತಾಯಿಹು ಸೂಪರ್ ಕಂಪ್ಯೂಟರ್‌ಗಿಂತ ಶೇ.60ರಷ್ಟು ಅಧಿಕವೇಗದಲ್ಲಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಸಮ್ಮಿಟ್ ಹೊಂದಿದೆ.ಸನ್‌ವೇ ತಾಯಿಹು ಲೈಟ್‌ನ ವೇಗವು 93 ಪೆಟಾಫ್ಲಾಪ್ಸ್‌ಗಳಷ್ಟಾಗಿತ್ತು.
ಆದರೆ ಚೀನಾದ ಬಳಿ ಈಗಾಗಲೇ ಸುಮಾರು 500 ಅತಿ ವೇಗದ ಸೂಪರ್ ಕಂಪ್ಯೂಟರ್‌ಗಳಿದ್ದರೆ, ಅಮೆರಿಕದ ಬಳಿಯಿರುವ ಸೂಪರ್ ಕಂಪ್ಯೂಟರ್‌ಗಳ ಸಂಖ್ಯೆ 143 ಆಗಿದೆ.





