ಆದಿತ್ಯನಾಥ್ ಇದ್ದ ದೇವಸ್ಥಾನದ ಸಮೀಪವೇ ಸೋದರನ ಮೇಲೆ ಗುಂಡಿನ ದಾಳಿ ನಡೆದಿದೆ: ಡಾ.ಕಫೀಲ್ ಖಾನ್

ಗೋರಖಪುರ್, ಜೂ.11: ತನ್ನ ಸೋದರನ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಾ.ಕಫೀಲ್ ಖಾನ್, ಇದ್ಯಾವುದಕ್ಕೂ ತಾನು ಜಗ್ಗುವುದಿಲ್ಲ ಎಂದು ಹೇಳಿದ್ದಾರೆ.
"ನನ್ನ ಸೋದರನ ದೇಹ ಹೊಕ್ಕಿದ್ದ ಬುಲೆಟ್ ಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಆತ ಈಗ ಐಸಿಯುವಿನಲ್ಲಿದ್ದಾನೆ. ಆತನಿಗೆ ಮೂರು ಗುಂಡುಗಳು ತಾಗಿವೆ. ಆತನನ್ನು ಕೊಲ್ಲುವ ಉದ್ದೇಶ ಅವರಿಗಿತ್ತು. ಯಾರು ಗುಂಡು ಹೊಡೆದರೆಂದು ತಿಳಿದಿಲ್ಲ. ಆದರೆ ಘಟನೆ ಉತ್ತರ ಪ್ರದೇಶ ಮುಖ್ಯಮಂತ್ರಿಯಿದ್ದ ಗೋರಖನಾಥ ದೇವಸ್ಥಾನಕ್ಕಿಂತ 500 ಮೀಟರ್ ದೂರದಲ್ಲಿ ನಡೆದಿದೆ. ಇಬ್ಬರು ಯುವಕರು ಸ್ಕೂಟಿಯಲ್ಲಿ ಬಂದು, ಸೋದರನತ್ತ ಗುಂಡು ಹಾರಿಸಿ ಪರಾರಿಯಾಗಿದ್ದಾರೆ'' ಎಂದು ಅವರು ತಿಳಿಸಿದ್ದಾರೆ.
ತಮ್ಮ ಸೋದರನಿಗೆ ಚಿಕಿತ್ಸೆ ನೀಡಲು ವಿಳಂಬಿಸಿದ್ದಕ್ಕಾಗಿ ಅವರು ಪೊಲೀಸರನ್ನು ದೂರಿದ್ದಾರೆ. "ಇದು ಇಲ್ಲಿನ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ'' ಎಂದು ಟ್ವೀಟ್ ಮಾಡಿದ್ದಾರೆ.
ಬೈಕಿನಲ್ಲಿ ಬಂದ ಆಗಂತುಕರು ರವಿವಾರ ರಾತ್ರಿ ಸುಮಾರು 11 ಗಂಟೆಗೆ ಕಫೀಲ್ ಖಾನ್ ಅವರ ಸೋದರ ಜಮೀಲ್ (34) ಅವರ ಮೇಲೆ ಹುಮಾಯುನಪುರದ ಜೆಪಿ ಆಸ್ಪತ್ರೆಯ ಸಮೀಪ ಗುಂಡು ಹಾರಿಸಿದ್ದರು. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಜಮೀಲ್ ಬಲ ಭುಜ, ಕುತ್ತಿಗೆ ಹಾಗೂ ಕೆನ್ನೆಗೆ ಗುಂಡಿನ ಗಾಯಗಳಾಗಿವೆ.
Allah rahem kare.
— realdrkafeelkhan (@drkafeelkhan) June 10, 2018
M not going to bend pic.twitter.com/uG4sZYVNVH







