ತಾಜ್ ಮಹಲ್ ಹೆಸರನ್ನು ‘ರಾಮ ಅಥವಾ ಕೃಷ್ಣ ಮಹಲ್’ ಎಂದು ಬದಲಿಸಬೇಕು ಎಂದ ಬಿಜೆಪಿ ಶಾಸಕ

ಹೊಸದಿಲ್ಲಿ, ಜೂ.11: ವಿಶ್ವ ವಿಖ್ಯಾತ, ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಹೆಸರನ್ನು ‘ರಾಮ ಮಹಲ್’ ಅಥವಾ ‘ಕೃಷ್ಣ ಮಹಲ್’ ಎಂದು ಬದಲಿಸಬೇಕು ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದ ಬಲಿಯಾ ಕ್ಷೇತ್ರದ ಶಾಸಕರಾಗಿರುವ ಇವರು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾದವರು. “ತಾಜ್ ಮಹಲ್ ಹೆಸರನ್ನು ನಾವು ರಾಮ್ ಮಹಲ್ ಅಥವಾ ಕೃಷ್ಣ ಮಹಲ್ ಎಂದು ಬದಲಿಸುತ್ತೇವೆ. ಅದರಲ್ಲೇನೂ ತಪ್ಪಿಲ್ಲ. ಕೊಲ್ಕತ್ತಾದ ವಿಕ್ಟೋರಿಯಾ ಪ್ಯಾಲೇಸ್ ಹೆಸರನ್ನು ಜಾನಕಿ ಪ್ಯಾಲೇಸ್ ಎಂದು ಬದಲಿಸಬೇಕು. ಭಾರತೀಯ ಸಂಪನ್ಮೂಲಗಳನ್ನು ಬಳಸಿ ಮುಸ್ಲಿಮ್ ರಾಜರು ಕಟ್ಟಿರುವ ಎಲ್ಲಾ ಕಟ್ಟಡಗಳ ಹೆಸರನ್ನೂ ಬದಲಾಯಿಸಬೇಕಾಗಿದೆ” ಎಂದವರು ಹೇಳಿದ್ದಾರೆ.
ಶಾಸಕನಾದಾಗಿನಿಂದಲೂ ಸುರೇಂದ್ರ ಸಿಂಗ್ ಇಂತಹ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ.
Next Story





