ಕೋಟೇಶ್ವರ: ಬ್ಯಾರೀಸ್ ಗ್ರೀನ್ ಅವೆನ್ಯೂಗೆ ಐಜಿಬಿಸಿ ಪ್ಲಾಟಿನಂ ದೃಢೀಕರಣ
ಜೂನ್ 17 ರಂದು ಉದ್ಘಾಟನೆ

ಮಂಗಳೂರು, ಜೂ. 11 : ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಿರ್ಮಾಣವಾಗಿರುವ ಬ್ಯಾರೀಸ್ ಗ್ರೂಪ್ ನ ನೂತನ ವಸತಿ ಸಮುಚ್ಚಯ ಬ್ಯಾರೀಸ್ ಗ್ರೀನ್ ಅವೆನ್ಯೂ ಪ್ರತಿಷ್ಠಿತ ಐಜಿಬಿಸಿ ( ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್) ಪ್ಲಾಟಿನಂ ದೃಢೀಕರಣದ ಗೌರವಕ್ಕೆ ಪಾತ್ರವಾಗಿದೆ.
ಕರಾವಳಿ ಕರ್ನಾಟಕದಲ್ಲೇ ಈ ಗೌರವಕ್ಕೆ ಪಾತ್ರವಾದ ಪ್ರಪ್ರಥಮ ಯೋಜನೆ ಇದು. ಪರಿಸರ ಸ್ನೇಹಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಬ್ಯಾರೀಸ್ ಗ್ರೂಪ್ ಗೆ ಈ ಮೂಲಕ ಇನ್ನೊಂದು ಪ್ರತಿಷ್ಠಿತ ಗೌರವ ಸಿಕ್ಕಿದಂತಾಗಿದೆ.
ಜೂ.17ರಂದು ಈ ನೂತನ ಯೋಜನೆ ಉದ್ಘಾಟನೆಯಾಗಲಿದೆ. ಅದೇ ದಿನ ರಾಜ್ಯ ನಗರಾಭಿವೃದ್ಧಿ ಹಾಗು ವಸತಿ ಸಚಿವ ಯು ಟಿ ಖಾದರ್ ಹಾಗು ಇತರ ಗಣ್ಯರ ಉಪಸ್ಥಿತಿಯಲ್ಲಿ ಐಜಿಬಿಸಿ ದೃಢೀಕರಣದ ಫಲಕವನ್ನು ಬ್ಯಾರೀಸ್ ಗ್ರೂಪ್ ಗೆ ಹಸ್ತಾಂತರಿಸಲಾಗುವುದು.
"ಪರಿಸರ ಸ್ನೇಹಿ ನಿರ್ಮಾಣ ಒಂದೇ ನಮಗಿರುವ ದಾರಿ. ಆ ಮೂಲಕ ಮಾತ್ರ ನಾವು ಜನರು ಮತ್ತು ನಮ್ಮ ಭೂಮಿಯ ಮೇಲೆ ರಚನಾತ್ಮಕ ಬದಲಾವಣೆ ತರಬಹುದು" ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸೈಯದ್ ಮುಹಮ್ಮದ್ ಬ್ಯಾರಿ ಅವರು ಪ್ರತಿಕ್ರಿಯಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 98451 69663








