ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಯುನಿಟ್: "ಅಲ್-ರಯ್ಯನ್ ಪುಸ್ತಕ" ಬಿಡುಗಡೆ, ಈದ್ ಕಿಟ್ ವಿತರಣೆ

ಬಂಟ್ವಾಳ, ಜೂ. 11: ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಯುನಿಟ್ ಇದರ ವತಿಯಿಂದ 4ನೆ ವರ್ಷದ ರಂಝಾನ್ ಪ್ರಯುಕ್ತ "ಅಲ್-ರಯ್ಯಾನ್ ಪುಸ್ತಕ" ಬಿಡುಗಡೆ ಹಾಗೂ ಈದ್ ಕಿಟ್ ಕಾರ್ಯಕ್ರಮ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮದ ಸಭಾಂಗಣದಲ್ಲಿ ರವಿವಾರ ನಡೆಯಿತು.
ಅಸ್ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಗಳ್ ದುವಾಃ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಮುದರ್ರಿಸ್ ಉಸ್ಮಾನ್ ದಾರಿಮಿ ಹಾಗೂ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಅವರು ಮದ್ರಸ ಮಕ್ಕಳಿಗೆ ಪುಸ್ತಕ ವಿತರಿಸಿದರು. ಕಾರ್ಯಕ್ರಮದಲ್ಲಿ ಅಶ್ರಫ್ ಫೈಝಿ ಕೊಡಗು ಮಾತನಾಡಿ, ಬಡ ಬಗ್ಗರಿಗೆ ದಾನ ಮೂಲಕ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಘಟಕವು ಮಾದರಿಯಾಗಿದೆ ಎಂದರು.
ವೇದಿಕೆಯಲ್ಲಿ ಪುರಸಭಾ ಸದಸ್ಯ ಮುನೀಶ್ ಅಲಿ, ಮುಹಮ್ಮದ್ ಬಿ.ಕಾಂ, ಇಸ್ಮಾಯಿಲ್ ಅರಬಿ, ಸಿದ್ದೀಕ್ ರಹ್ಮಾನಿ, ಉದ್ಯಮಿ ವಿ.ಎಚ್. ಸಲ್ಮಾನ್, ಕ್ಯಾಂಪಸ್ ವಿಂಗ್ ಮುಖಂಡರಾದ ಸತ್ತಾರ್, ಮುಸ್ತಫಾ, ಬಿಲಾಲ್, ರುಮಾನ್, ಸಫೀಕ್, ಅಬ್ದುಲ್ಲಾ ಉಪಸ್ಥಿತರಿದ್ದರು. ಬಿ.ಎಂ ಸವಾಝ್ ಪ್ರಸ್ತಾವಿಸಿದರು. ಹಾರೂನ್ ರಶೀದ್ ಸ್ವಾಗತಿಸಿ, ನಿರೂಪಿಸಿದರು.





