ಸಿದ್ದರಾಮಯ್ಯನವರಿಗೆ ಮತ್ತೊಂದು ಮದುವೆ ಮಾಡುವೆ: ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ

ಬೆಂಗಳೂರು, ಜೂ. 11: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನೂ 21 ವರ್ಷದ ನವ ಯುವಕನಂತೆ ಓಡಾಡುತ್ತಿದ್ದು, ಅವರಿಗೆ ಮತ್ತೊಂದು ಮದುವೆ ಮಾಡುತ್ತೇನೆ ಎಂದು ಸಿದ್ದರಾಮಯ್ಯನವರ ಎದುರೇ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಚಟಾಕಿ ಹಾರಿಸಿದ್ದಾರೆ.
ಸೋಮವಾರ ಬಾದಾಮಿ ವಿಧಾನಸಭಾ ಕ್ಷೇತ್ರದ ಕಾಳಿದಾಸ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ವಯಸ್ಸು 71 ಅಂತಾರೆ. ಆದರೆ, ಅವರು 21ರ ವಯಸ್ಸಿನ ಹುಡುಗನಂತೆ ಓಡಾಡುತ್ತಿದ್ದು, ಅವರ ಹುಮ್ಮಸ್ಸು ನೋಡಿದರೆ ನಾನು ಅವರಿಗೆ ಇನ್ನೊಂದು ಮದುವೆ ಮಾಡಬೇಕು ಎಂದು ಅನ್ನಿಸುತ್ತಿದೆ ಎಂದರು.
ಬಾದಾಮಿಯಲ್ಲಿ ನಾವು ಸ್ವಲ್ಪ ಸಡಿಲ ಬಿಟ್ಟಿದ್ದರೆ ಇಲ್ಲಿಯೂ ಸಿದ್ದರಾಮಯ್ಯ ಅವರನ್ನು ಸೋಲಿಸಿ ಬಿಡುತ್ತಿದ್ದರು. ನಾವು ಅದಕ್ಕೆ ಅವಕಾಶ ಕೊಡಲಿಲ್ಲ. ಅವರನ್ನು ಗೆಲ್ಲಿಸಿದ್ದೇವೆ. ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ ಎಂದು ಚಿಮ್ಮನಕಟ್ಟಿ ಇದೇ ವೇಳೆ ಹೇಳಿದರು.
Next Story





