ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
ಪಡುಬಿದ್ರಿ, ಜೂ.11: ಉಚ್ಚಿಲ ರೈಲ್ವೆ ಸೇತುವೆ ಬಳಿಯ ನಿವಾಸಿ ಫಾರೂಕ್ ಎಂಬವರ ಪತ್ನಿ ಆಯಿಷಾತುಲ್ ಮಫಿಚಾ (23) ಎಂಬವರು ಗಂಡನ ಮೇಲಿನ ಬೇಸರದಲ್ಲಿ ಜೂ.6ರಂದು ರಾತ್ರಿ ಮನೆಯಿಂದ ಹೋದವರು ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು: ಹೊಸಂಗಡಿ ಗ್ರಾಮದ ಅನ್ನಪೂರ್ಣ(55) ಎಂಬವರು ಜೂ.3ರಂದು ಮಗಳು ಪದ್ಮಶ್ರೀ ಜೊತೆ ಜಗಳವಾಡಿ ಮನೆ ಬಿಟ್ಟು ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. 5.2 ಅಡಿ ಎತ್ತರ, ಬಿಳಿ ಮೈ ಬಣ್ಣ ಮತ್ತು ನೀಲಿ ಬಣ್ಣದ ರವಿಕೆ ಮತ್ತು ಗುಲಾಬಿ ನೀಲಿ ಬಣ್ಣದ ಸೀರೆ ಮತ್ತು ಕಿವಿಯಲ್ಲಿ ಚಿನ್ನದ ಬೆಂಡೂಲೆ ಧರಿಸಿದ್ದ ಇವರು ಕನ್ನಡ ಮಾತನಾಡು ತ್ತಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದೆ.
Next Story





