ಇವಿಎಂ ಮತಯಂತ್ರ ನಿಷೇಧ, ಮತಪತ್ರದ ಮೂಲಕ ಚುನಾವಣೆಗೆ ಒತ್ತಾಯಿಸಿ ಅಂಚೆ ಪತ್ರ ಅಭಿಯಾನ

ಬಂಟ್ವಾಳ, ಜೂ. 11: ಇವಿಎಂ ಮತಯಂತ್ರವನ್ನು ನಿಷೇಧಿಸಬೇಕು ಹಾಗೂ ಮತಪತ್ರದ ಮೂಲಕ ಚುನಾವಣೆ ನಡೆಸುವಂತೆ ಒತ್ತಾಯಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಅಂಚೆ ಪತ್ರ ಚಳವಳಿ ಅಭಿಯಾನಕ್ಕೆ ವಿಟ್ಲ ಅಂಚೆಕಚೇರಿ ಮುಂಭಾಗದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಮತಯಂತ್ರದ ಬಗ್ಗೆ ಸಂಶಯವನ್ನು ವ್ಯಕ್ತ ಪಡಿಸಿ, ಮತಪತ್ರವನ್ನೇ ಮುಂದಿನ ಚುನಾವಣೆಯಲ್ಲಿ ಬಳಕೆ ಮಾಡಬೇಕೆಂಬ ಈ ಅಭಿಯಾನದಲ್ಲಿ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಕಾರ್ಡ್‌ಗಳನ್ನು ಬರೆದು ಅಂಚೆ ಡಬ್ಬಿಗೆ ಹಾಕುವ ಮೂಲಕ ಚಾಲನೆ ನೀಡಲಾಯಿತು. ಸುಮಾರು 500ಕ್ಕೂ ಅಧಿಕ ಅಂಚೆ ಪತ್ರ ಪೋಸ್ಟ್ ಮಾಡಲಾಗಿದೆ.
ಈ ಸಂದರ್ಭದಲ್ಲಿ ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಡಿಸಿಸಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಬಾಳೆಕಲ್ಲು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ಕಾರ್ಯದರ್ಶಿ ಎಸ್. ಕೆ. ಮುಹಮ್ಮದ್ ವಿಟ್ಲ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ. ಕೆ. ಎಂ. ಅಶ್ರಫ್, ಅಳಿಕೆ ಗ್ರಾಪಂ ಅಧ್ಯಕ್ಷ ಪದ್ಮನಾಭ ಪೂಜಾರಿ, ಪೆರುವಾಯಿ ಗ್ರಾಪಂ ಅಧ್ಯಕ್ಷ ರಾಲ್ಫ್ ಡಿಸೋಜ, ವಿವಿಧ ವಲಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮುಳಿಯ, ಪಂಚಪಾಲ ಶೆಟ್ಟಿ ಪೆರುವಾಯಿ, ಕೇಪು ಗ್ರಾಪಂ ಸದಸ್ಯ ಅಬ್ದುಲ್ ಕರೀಂ ಕುದ್ದುಪದವು, ಭವಾನಿ ರೈ ಕೊಲ್ಯ, ಪ್ರಭಾಕರ ಭಟ್ ಮಾವೆ, ಪುಷ್ಪಾ ಎಂ. ಶೆಟ್ಟಿ, ಸಮೀಪ್ ಪಳಿಕೆ, ಮುರಳೀಧರ ಶೆಟ್ಟಿ ಮತ್ತಿತರರು ಹಾಜರಿದ್ದರು.







