ತನ್ನ 39 ಸಾವಿರ ಕೋಟಿ ರೂ. ಸಾಲಕ್ಕೆ ಮೋದಿ, ಸುಪ್ರೀಂ ಕೋರ್ಟ್ ಕಾರಣವೆಂದ ವಿಡಿಯೋಕಾನ್ !

ಹೊಸದಿಲ್ಲಿ, ಜೂ.12: ತನ್ನ ಮೇಲಿರುವ 39 ಸಾವಿರ ಕೋಟಿ ರೂ. ಸಾಲಕ್ಕೆ ಗ್ರಾಹಕ ವಸ್ತು ತಯಾರಿಕಾ ಸಂಸ್ಥೆ ವಿಡಿಯೋಕಾನ್ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಹಾಗು ಬ್ರೆಝಿಲ್ ಸರಕಾರವನ್ನು ದೂಷಿಸಿದೆ.
ನ್ಯಾಶನಲ್ ಕಂಪೆನಿ ಲಾ ಟ್ರಿಬ್ಯುನಲ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ ಸಾಲದಾತರಿಂದ ಮನವಿ ಸಲ್ಲಿಸಿದ ನಂತರ ವಿಡಿಯೋಕಾನ್ ಇಂಡಸ್ಟ್ರೀಸ್ ದಿವಾಳಿತನದ ಪ್ರಕ್ರಿಯೆಗಳನ್ನು ಎದುರಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರ ನೋಟು ಅಮಾನ್ಯ ನಿರ್ಧಾರವು ಕ್ಯಾಥೋಡ್ ರೇ ಟ್ಯೂಬ್ ಟೆಲಿವಿಶನ್ ಗಳ ಸರಬರಾಜನ್ನು ಸ್ಥಗಿತಗೊಳಿಸಿತ್ತು ಇದರಿಂದ ಉದ್ಯಮವು ಮುಚ್ಚುಗಡೆಯಾಗಿತ್ತು ಎಂದು ವಿಡಿಯೋಕಾನ್ ತಿಳಿಸಿದೆ ಎನ್ನಲಾಗಿದೆ. ಇದೇ ಸಂದರ್ಭ ಬ್ರೆಝಿಲ್ ಲ್ಲಿರುವ ಕಂಪೆನಿಯ ತೈಲ ಹಾಗು ಅನಿಲ ಉದ್ಯಮ ಸಂಕಷ್ಟದಲ್ಲಿತ್ತು ಹಾಗು ಸುಪ್ರೀಂ ಕೋರ್ಟ್ ಲೈಸೆನ್ಸ್ ರದ್ದುಗೊಳಿಸಿದ ನಂತರ ದೂರಸಂಪರ್ಕ ಉದ್ಯಮವೂ ನಷ್ಟ ಅನುಭವಿಸಿತು.
Next Story





