ವಡ್ಡರ್ಸೆ ಪ್ರೌಢಶಾಲೆ: ಬಾಲ ಕಾರ್ಮಿಕ ವಿರೋಧಿ ದಿನ

ಉಡುಪಿ, ಜೂ.12: ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಮಂಗಳವಾರ ವಡ್ಡರ್ೆ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಯೋಜನಾ ನಿರ್ದೇಶಕ ಪ್ರಭಾಕರ ಆಚಾರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಬಾಲ ಕಾರ್ಮಿಕರನ್ನು ದುಡಿಮೆಯ ಕ್ಷೇತ್ರದಿಂದ ಹೊರತಂದು ಶೋಷಣೆ ಮುಕ್ತ ಜೀವನ ನಡೆಸುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಂಡಿದೆ ಎಂದರು.
ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಅನುಷ್ಠಾನಗೊಳಿಸಿದ ಕಾರ್ಯ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಅವರು, ಕಳೆದ 2 ವರ್ಷಗಳಿಂದ ಉಡುಪಿ ಜಿಲ್ಲೆ ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಿ ಗುರುತಿಸಿಕೊಂಡಿದೆ ಎಂದರು. ಶಾಲೆಯ ಮುಖ್ಯ ಶಿಕ್ಷಕ ಆನಂದ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳ ಬಾಲ್ಯ ಶೋಷಣೆಯಿಂದ ಮುಕ್ತವಾಗಿರಲು ಸಮುದಾಯದ ಪಾತ್ರ ಅತಿ ಮುಖ್ಯ ಎಂದರು. ಎಸ್‌ಡಿಎಂಸಿ ಸದಸ್ಯ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು.
ಶಿಕ್ಷಕಿ ಗೀತಾ ಎಸ್. ಸ್ವಾಗತಿಸಿ, ರಾಜೇಂದ್ರ ಶೆಟ್ಟಿ ವಂದಿಸಿದರು. ಕಾರ್ಯಕ್ರಮ ವನ್ನು ಶಿಕ್ಷಕ ಹೆರಿಯ ಸಂಘಟಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘ ಕಾನೂನು ಸಾಕ್ಷರತಾ ಸಂಘದಡಿಯಲ್ಲಿ ಆಯೋಜಿಸಲಾಗಿತ್ತು.





