ಉಪನ್ಯಾಸಕರಿಗೆ ಬೋಧನಾ ಅಭಿವೃದ್ಧಿ ಕಾರ್ಯಕ್ರಮ

ಶಿರ್ವ, ಜೂ.12: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಕಾಲೇಜಿನ ಐಎಸ್‌ಟಿಇ ಘಟಕದ ಸಹಯೋಗದೊಂದಿಗೆ ಜಲಸಂಪನ್ಮೂಲ ಮತ್ತು ಭೂ ಪರಿಸರದಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಅದರ ನಿವಾರಣೆ ಕುರಿತ ಬೋಧನಾ ಅಭಿವೃದ್ಧಿ ಕಾರ್ಯಕ್ರಮವನ್ನು ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎನ್‌ಐಟಿಕೆ ಸುರತ್ಕಲ್‌ನ ಅಪ್ಲೈಡ್ ಮೆಕ್ಯಾ ನಿಕ್ಸ್ ಮತ್ತು ಹೈಡ್ರಾಲಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಲಕ್ಷ್ಮಣ್ ನಂದಗಿರಿ ಮಾನವ ಕುಲಕ್ಕೆ ನೀರಿನ ಮಹತ್ವ ಮತ್ತು ವಿವಿಧ ರಾಜ್ಯಗಳು ಮತ್ತು ರಾಷ್ಟ್ರಗಳ ನಡುವೆ ನೀರಿಗಾಗಿ ನಡೆಯುತ್ತಿುವ ಹೋರಾಟದ ಬಗ್ಗೆ ವಿವರಿಸಿದರು.
ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ, ಇಂದಿನ ದಿನಗಳಲ್ಲಿ ನೈಸರ್ಗಿಕ ವಿಕೋಪಗಳಿಂದ ಎದುರಾದ ಸವಾಲುಗಳಿಗೆ ಇಂಜಿನಿಯರ್‌ಗಳು ಪ್ರಾಚೀನ ಕಾಲದಲ್ಲಿ ಬಳಸಿದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಸಂಶೋಧನೆಗಳನ್ನು ಮಾಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಆನಂದ್ ವಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಉಪನ್ಯಾಸಕರಾದ ಸುನಿಲ್ ಹಲ್ದಾಂಕರ್ ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಉಪನ್ಯಾಸಕಿ ದೀಪಿಕ ಬಿ.ವಿ ವಂದಿಸಿದರು.
ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಸಹಾಯಕ ಉಪನ್ಯಾಸಕಿ ಶೈನಿ ಮೆಲಿಟ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ರ್ಯಕ್ರಮದಲ್ಲಿ ವಿವಿದ ಇಂಜಿನಿಯರಿಂಗ್ ಕಾಲೇಜುಗಳ 40ಕ್ಕೂ ಅಧಿಕ ಉಪನ್ಯಾಸಕರು ಭಾಗವಹಿಸಿದ್ದರು.







