ಲೋಕಸಭಾ ಸ್ಥಾನಕ್ಕೆ ಸಂಸದ ವೈಜಯಂತ್ ಪಾಂಡಾ ರಾಜೀನಾಮೆ

ಹೊಸದಿಲ್ಲಿ, ಜೂ. 12: ಬಿಜೆಡಿಗೆ ರಾಜೀನಾಮೆ ನೀಡಿದ ಎರಡು ವಾರಗಳ ಬಳಿಕ ಕೇಂದ್ರಪಾರದ ಲೋಕಸಭಾ ಸಂಸದ ವೈಜಯಂತ್ ಜಯ ಪಾಂಡಾ ಮಂಗಳವಾರ ಲೋಕಸಭಾ ಸ್ಥಾನಕ್ಕೆ ತನ್ನ ರಾಜೀನಾಮೆ ಸಲ್ಲಿಸಿದ್ದಾರೆ.
ಜನವರಿ 24ರಂದು ಅವರನ್ನು ‘ಪಕ್ಷ ವಿರೋಧಿ ಚಟುವಟಿಕೆ’ ಹಿನ್ನೆಲೆಯಲ್ಲಿ ಬಿಜೆಡಿಯಿಂದ ವಜಾಗೊಳಿಸಲಾಗಿತ್ತು. ಅನಂತರ ಅವರು ಮೇ 28ರಂದು ಪಕ್ಷ ತ್ಯಜಿಸಿದ್ದರು. ‘‘ತಾನು ಪತ್ರವನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್‌ಗೆ ರವಾನಿಸಿರುವುದಾಗಿ’’ ಪಾಂಡಾ ತಿಳಿಸಿದ್ದಾರೆ.
Next Story





