ಜೂ. 14: ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ
ಕೊಣಾಜೆ, ಜೂ. 12: ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಜೂ. 14ರಂದು ರಕ್ತದಾನಿಗಳ ದಿನಾಚರಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ರಕ್ತದಾನದ ಅರಿವು ಮೂಡಿಸುವ ಕಾರ್ಯವನ್ನು ಬೀದಿ ನಾಟಕಗಳು ಹಾಗೂ ಭಿತ್ತಿ ಪತ್ರಗಳ ಮೂಲಕ ಪ್ರದರ್ಶಿಸಲಿದ್ದಾರೆ.
ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ವತಿಯಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಆಸುಪಾಸಿನ ಸಾರ್ವಜನಿಕರಿಗೆ , ಸಂಘ ಸಂಸ್ಥೆಗಳಿಗೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಅವಕಾಶವಿದ್ದು, ರಕ್ತದಾನ ಮಾಡುವ ದಾನಿಗಳಿಗೆ ಆಸ್ಪತ್ರೆಯ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಗುವುದು ಅಲ್ಲದೆ ಮುಂದೆ ರಕ್ತದ ಅವಶ್ಯಕತೆ ಬಂದಾಗ ಈ ಪ್ರಮಾಣ ಪತ್ರದ ಮೂಲಕ ಅವರಿಗೆ ಲಭ್ಯತೆಯ ಮೇರೆಗೆ ರಕ್ತ ನೀಡುವ ಸೌಲಭ್ಯವನ್ನು ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9743984986 ನಂಬರನ್ನು ಸಂಪರ್ಕಿಸಬಹುದು ಎಂದು ವೈದ್ಯಕೀಯ ಅಧೀಕ್ಷಕರಾದ ಮೇಜರ್ ಡಾ.ಶಿವಕುಮಾರ್ ಹಿರೇಮಠ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





