ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜಯಗಳಿಸಿದ ಎಸ್.ಎಸ್.ಬೋಜೇಗೌಡ
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಗೆ ಸೋಲು

ಬೋಜೇಗೌಡ
ಮಂಗಳೂರು, ಜೂ. 12: ನೈರುತ್ಯ ಶಿಕ್ಷಕ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ಅವರು ತೀವ್ರ ಪ್ರತಿಸ್ಪರ್ಧೆ ನೀಡಿದ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಮಣಿಸಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ನೈರುತ್ಯ ಶಿಕ್ಷಕ ಕ್ಷೇತ್ರ ಚುನಾವಣೆಗೆ ಈ ಬಾರಿ 12 ಮಂದಿ ಸ್ಪರ್ಧಿಸಿದ್ದು ತಮ್ಮನ್ನು ಹೊರತುಪಡಿಸಿ, ಸ್ಪರ್ಧಿಸಿದ ಎಲ್ಲ 11 ಅಭ್ಯರ್ಥಿಗಳ ನಿರ್ಗಮನದ ನಂತರವೂ ಜೆಡಿಎಸ್ನ ಭೋಜೇಗೌಡ ಅವರು ಗೆಲುವಿಗೆ ನಿಗಧಿಯಾಗಿದ್ದ 7,846 ಮತಗಳ ಕೋಟವನ್ನು ತಲುಪಲಾಗದೆ 7,310 ಮತ ಪಡೆದರು.
ಅಂತೆಯೆ ಚುನಾವಣೆ ಆಯೋಗ ಅಂತಿಮವಾಗಿ ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದ ಬೋಜೇಗೌಡ ಅವರನ್ನು ಜಯಶಾಲಿ ಎಂದು ಘೋಷಣೆ ಮಾಡಿತು.
Next Story





