ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್‌ಗೆ 4 ಪದಕ

ಮೂಡುಬಿದಿರೆ, ಜೂ.12: ಜಪಾನ್‌ನ ಗಿಫುವಿನಲ್ಲಿ ಮುಕ್ತಾಯಗೊಂಡ 18ನೇ ಏಷ್ಯನ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ 4 ಮಂದಿ ಕ್ರೀಡಾಪಟುಗಳು ಪದಕಗಳನ್ನು ಗಳಿಸಿದ್ದಾರೆ.
ಶ್ರೀಲಂಕಾದ ಕೊಲಂಬೋದಲ್ಲಿ ಈ ಹಿಂದೆ ನಡೆದಿದ್ದ ದಕ್ಷಿಣ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಪದಕದ ಸಾಧನೆಯನ್ನು ಮಾಡಿದ್ದ ಕ್ರೀಡಾಪಟುಗಳಲ್ಲಿ ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ 1.75ಮೀ ಎತ್ತರ ಜಿಗಿದು ಅಭಿನಯ ಶೆಟ್ಟಿ ಕಂಚಿನ ಪದಕ, ಬಾಲಕರ ವಿಭಾಗದ ಶಾಟ್‌ಪುಟ್‌ನಲ್ಲಿ 18.22ಮೀ ದೂರಕ್ಕೆ ಎಸೆದು ಆಶಿಷ್ ಕಂಚಿನ ಪದಕ, ಬಾಲಕಿಯರ ವಿಭಾಗದ 4x400ಮೀ ರಿಲೇಯಲ್ಲಿ ಶುಭ ವಿ. ಬೆಳ್ಳಿಯ ಪದಕ ಹಾಗೂ ಬಾಲಕರ ವಿಭಾಗದ 4x100 ಮೀ ರಿಲೇಯಲ್ಲಿ ಪ್ರಜ್ವಲ್ ಮಂದಣ್ಣ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಏಷ್ಯನ್ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.
Next Story





