ಮೂಡಿಗೆರೆ: ಮಳೆಹಾನಿ ಪ್ರದೇಶಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಭೇಟಿ

ಮೂಡಿಗೆರೆ, ಜೂ.13: ತಾಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯ ವಿವಿಧೆಡೆ ಮಳೆಹಾನಿ ಸ್ಥಳಗಳಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಭೇಟಿ ನೀಡಿದ್ದರು. ಜಾಣಿಗೆ-ಕನ್ನೇಹಳ್ಳಿ ರಸ್ತೆ ನಡುವೆ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ತೊಡಕಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಅಧಿಕಾರಿಗಳನ್ನು ಸಂಪರ್ಕಿಸಿ ಶೀಘ್ರ ದುರಸ್ತಿ ಕಾರ್ಯ ನಡೆಸುವಂತೆ ಸೂಚಿಸಿದರು.
ಈ ವೇಳೆ ಗೋಣಿಬೀಡು ಹೋಬಳಿ ಬಿಜೆಪಿ ಅಧ್ಯಕ್ಷ ಸುನೀಲ್ ನಿಡಗೋಡು, ಜೆ.ಎಸ್.ರಘು, ಭರತ್ ಕನ್ನೇಹಳ್ಳಿ, ಆದರ್ಶ್ ಮತ್ತಿತರರು ಇದ್ದರು.
Next Story





