ಮೈಸೂರು: ಸುತ್ತೂರು ಕರ್ತೃ ಗದ್ದುಗೆ ಮಠಕ್ಕೆ ಸಚಿವ ಎನ್.ಮಹೇಶ್ ಭೇಟಿ

ಮೈಸೂರು,ಜೂ.13: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಪಿಲಾನದಿ ತೀರದಲ್ಲಿರುವ ಸುತ್ತೂರು ಕರ್ತೃ ಗದ್ದುಗೆ ಮಠಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಸಚಿವ ಎನ್. ಮಹೇಶ್ ಭೇಟಿ ನೀಡಿದರು.
ಸುತ್ತೂರು ಮಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡರು. ಸಚಿವರಾದ ನಂತರ ಇದೇ ಮೊದಲ ಬಾರಿ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಮಹೇಶ್ ಅವರು ಶ್ರೀಗಳ ಜೊತೆ ಉಭಯಕುಶಲೋಪರಿ ಮಾತುಕತೆ ನಡೆಸಿದರು.
ನಂಜನಗೂಡು ಬಿ.ಇ.ಓ ನಾರಾಯಣ, ಬಿಎಸ್‍ಪಿ ಮುಖಂಡರಾದ ಶ್ರೀಕಂಠ, ರಾಜು, ಕುಮಾರ್, ಮಹದೇವ, ಗುರುಮೂರ್ತಿ ಸೇರಿದಂತೆ ಹಲವರು ಸಚಿವರ ಜೊತೆಯಲ್ಲಿದ್ದರು
Next Story





