ಮಡಿಕೇರಿ: ಕೆಸರಿನಲ್ಲಿ ಸಿಲುಕಿದ ಲಾರಿ, ಬಸ್; ಪ್ರಯಾಣಿಕರ ಪರದಾಟ

ಮಡಿಕೇರಿ, ಜೂ.13 : ಲಾರಿ ಹಾಗೂ ಬಸ್ ಮುಖಾಮುಖಿಯಾದ ಸಂದರ್ಭ ಏಕಕಾಲದಲ್ಲಿ ರಸ್ತೆಗೆ ಅಡ್ಡಲಾಗಿ ಟಯರ್‍ಗಳು ಕೆಸರಿನಲ್ಲಿ ಸಿಲುಕಿದ ಪರಿಣಾಮ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ವಿರಾಜಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.
ಬುಧವಾರ ನಸುಕು ಸುಮಾರು 3 ಗಂಟೆ ವೇಳೆಗೆ ಬೇಗೂರು ರಸ್ತೆಯಲ್ಲಿ ಕೇರಳ ಮೂಲದ ಲಾರಿ ಹಾಗೂ ಕರ್ನಾಟಕದ ಖಾಸಗಿ ಬಸ್ ಮುಖಾಮುಖಿಯಾಗಿದ್ದು, ಭಾರೀ ಮಳೆಯಾಗುತ್ತಿದ್ದ ಕಾರಣ ಏಕಕಾಲದಲ್ಲಿ ಎರಡೂ ವಾಹನಗಳ ಟಯರ್‍ಗಳು ಕೆಸರಿನಲ್ಲಿ ಸಿಲುಕಿಕೊಂಡಿತು. ಬೆಳಗ್ಗಿನ ಜಾವವಾದ ಕಾರಣ ವಾಹನ ಚಾಲಕರು ಅಸಹಾಯಕರಾದರು. ಸೂರ್ಯ ಉದಯಿಸುವವರೆಗೂ ಪ್ರಯಾಣಿಕರು ಬಸ್‍ನಲ್ಲೇ ಪರದಾಡಬೇಕಾಯಿತು. ಘಟನೆಯಿಂದಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಮಧ್ಯಾಹ್ನದ ವೇಳೆಗೆ ವಾಹನಗಳ ಸಂಚಾರವನ್ನು ಸುಗಮಗೊಳಿಸಲಾಯಿತು.
Next Story





