ಜೂ. 18ರಿಂದ ಸಿಎಂ ಮಡವೂರು ಉರೂಸ್ ಕಾರ್ಯಕ್ರಮ
ಬಂಟ್ವಾಳ, ಜೂ. 14: ದಕ್ಷಿಣ ಭಾರತದ ಸುಪ್ರಸಿದ್ಧ ಝಿಯಾರತ್ ಕೇಂದ್ರವಾದ ಮಡವೂರು ಸಿಎಂ ಮಖಾಂ ಶರೀಫ್‌ನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿ ಸಿಎಂ ಮುಹಮ್ಮದ್ ಅಬೂಬಕರ್ ಮುಸ್ಲಿಯಾರ್ ಅವರ 28ನೆ ಉರೂಸ್ ಕಾರ್ಯಕ್ರಮ ಜೂ. 18ರಿಂದ 23ರವರೆಗೆ ನಡೆಯಲಿದೆ ಎಂದು ಅನಿಲಕಟ್ಟೆ ಮಡವೂರು ಸಿಎಂ ಮಖಾಂ ಯತೀಂಖಾನ ಎಜುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್‌ನ ಮುಖ್ಯಸ್ಥ ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್ ಹೇಳಿದ್ದಾರೆ.
ಗುರುವಾರ ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉರೂಸ್ ಪ್ರಯುಕ್ತ ಮಖಾಂ ಝಿಯಾರತ್, ಧ್ವಜಾರೋಹಣ, ಸಿ.ಎಂ ಅನುಸ್ಮರಣ ಸಮ್ಮೇಳನ, ಮತ ಪ್ರಭಾಷಣ, ಮಜ್ಲಿಸುನ್ನೂರು, ಸನದುದಾನ ಸಮ್ಮೇಳನ, ಸ್ವಲಾತ್ ಮಜ್ಲೀಸ್, ದ್ಸಿಕ್ರ್ ದುವಾಃ, ಅನ್ನದಾನ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಕರ್ನಾಟಕದ ಪ್ರತಿನಿಧಿಗಳಾಗಿ ಕುನ್ನುಂಗೈ ತಂಙಳ್, ಮಿತ್ತಬೈಲು ಉಸ್ತಾದ್, ಮಂಗಳೂರು ಖಾಝಿ ತ್ವಾಖಾ ಉಸ್ತಾದ್, ಕುಕ್ಕಾಜೆ ತಂಙಳ್, ಕಿನ್ಯ ತಂಙಳ್, ಹಬೀಬು ತಂಙಳ್, ಉದ್ಯಾವರ ತಂಙಳ್, ಕಿನ್ಯ ದಾರಿಮಿ, ರೆಂಜಲಾಡಿ ದಾರಿಮಿ ಹಾಗೂ ಇನ್ನಿತರ ಉಲಮಾ ಉಮರಾ, ರಾಜಕೀಯ ನೇತಾರರು, ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು, ಕರ್ನಾಟಕ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೈಯದ್ ಹುಸೈನ್ ಬಾಲವಿ ತಂಙಳ್ ಕುಕ್ಕಾಜೆ, ಪಿ.ಎ ಮುಹಮ್ಮದ್ ಮುಸ್ಲಿಯಾರ್, ಕೆ.ಎ ಹಸೈನಾರ್ ಮುಸ್ಲಿಯಾರ್, ಅಬೂಬಕ್ಕರ್ ಮಂಗಳಪದವು, ಅಬೂಬಕರ್ ಅನಿಲಕಟ್ಟೆ ಉಪಸ್ಥಿತರಿದ್ದರು.







