ಬೆಂಗಳೂರು: ಬಿನ್ನಿಪೇಟೆ ವಾರ್ಡ್ ಜೂ.18ಕ್ಕೆ ಉಪ ಚುನಾವಣೆ
ಬೆಂಗಳೂರು, ಜೂ. 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ವಾರ್ಡ್-121 ಬಿನ್ನಿಪೇಟೆ(ಸಾಮಾನ್ಯ ಮಹಿಳೆ) ವಾರ್ಡಿಗೆ ಉಪ ಚುನಾವಣೆಯು ಜೂ.18ರ ಸೋಮವಾರ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯ ವರೆಗೆ ನಡೆಯಲಿದೆ.
ವಾರ್ಡ್-121 ಬಿನ್ನಿಪೇಟೆಯಲ್ಲಿ 17,746 ಪುರುಷ ಹಾಗೂ 16,826 ಮಹಿಳಾ ಮತದಾರರು ಸೇರಿ ಒಟ್ಟು 34,572 ಮತದಾರರಿದ್ದು, ಸದರಿ ವಾರ್ಡ್ನ ಉಪ ಚುನಾವಣೆಯ ಮತ ಏಣಿಕೆ ಕಾರ್ಯವು ಜೂ. 20ರ ಬುಧವಾರ ನಗರದ ಗೃಹ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
Next Story