ಕರಾವಳಿಗರು ಹಸಿರು ಪ್ರೇಮಿಗಳು: ನ್ಯಾ. ವೆಂಕಟೇಶ್ ನಾಯ್ಕಾ

ಉಡುಪಿ, ಜೂ.14: ಮಾಲಿನ್ಯಗಳು ಜೀವಜಗತ್ತಿಗೆ ಸವಾಲನ್ನೊಡ್ಡುತ್ತಿರುವ ಈ ಸಂದರ್ಭದಲ್ಲಿ, ಸಸಿನೆಡುವ ಉದ್ದೇಶ ಅರಿತು ಅಳವಡಿಸಿದರೆ ಮುಂದಿನ ಜನಾಂಗಕ್ಕೆ ಬದುಕಲು ಭೂಮಿಯನ್ನು ನೀಡಿದಂತೆ ಎಂದು ಉಡುಪಿಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಹೇಳಿದ್ದಾರೆ.
ಗುರುವಾರ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಪರಿಸರ ದಿನಾಚರಣೆ ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಇತರೆಡೆಗೆ ಹೋಲಿಸಿದರೆ ಕರಾವಳಿ ಬಾಗದಲ್ಲಿ ಹಸಿರು ಕಾಣುತ್ತಿದೆ. ಇಂದಿಗೂ ಕರಾರುವಕ್ಕಾಗಿ ಮಳೆ ಬರುವ ವಿವರವನ್ನು ನೀಡಲು ಸಾಧ್ಯವಾಗು ತ್ತಿದೆ. ಆದರೆ ಇತರೆಡೆಗಳಲ್ಲಿ ಜನರು ನೀರಿಗಾಗಿ ಪಡುತ್ತಿರುವ ಬವಣೆ ವರ್ಣಿಸಲು ಅಸಾಧ್ಯ. ಜೀವಜಾಲಕ್ಕೆ ನೀರು ಮತ್ತು ಗಾಳಿಯ ಅಗತ್ಯವನ್ನು ಒತ್ತಿ ಹೇಳಿದ ನ್ಯಾಯಾಧೀಶರು, ವಿದ್ಯಾರ್ಥಿಗಳು ಬರೇ ಇಂಟರ್‌ನೆಟ್, ವಾಟ್ಸಾಪ್‌ಗಳಲ್ಲೇ ಸಮಯ ವ್ಯರ್ಥ ಮಾಡದೆ ಪರಿಸರ, ಪ್ರಕೃತಿಯೆಡೆಗೆ ಗಮನ ಹರಿಸಬೇಕಿದೆ ಎಂದರು.
ರಾಜ್ಯದ ಇತರೆಡೆಗೆ ಹೋಲಿಸಿದರೆ ಕರಾವಳಿ ಬಾಗದಲ್ಲಿ ಹಸಿರು ಕಾಣುತ್ತಿದೆ. ಇಂದಿಗೂ ಕರಾರುವಕ್ಕಾಗಿ ಮಳೆ ಬರುವ ವಿವರವನ್ನು ನೀಡಲು ಸ್ಯಾವಾಗುತ್ತಿದೆ.ಆದರೆಇತರೆಡೆಗಳಲ್ಲಿಜನರುನೀರಿಗಾಗಿಪಡುತ್ತಿರುವಬವಣೆವರ್ಣಿಸಲುಅಸ್ಯಾ. ಜೀವಜಾಲಕ್ಕೆ ನೀರು ಮತ್ತು ಗಾಳಿಯ ಅಗತ್ಯವನ್ನು ಒತ್ತಿ ಹೇಳಿದ ನ್ಯಾಯಾಧೀಶರು, ವಿದ್ಯಾರ್ಥಿಗಳು ಬರೇ ಇಂಟರ್‌ನೆಟ್, ವಾಟ್ಸಾಪ್‌ಗಳಲ್ಲೇ ಸಮಯ ವ್ಯರ್ಥ ಮಾಡದೆ ಪರಿಸರ, ಪ್ರಕೃತಿಯೆಡೆಗೆ ಗಮನ ಹರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಹಿರಿಯಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಅವರು ಮಾತನಾಡಿ, ಕಾನೂನಿಗೂ ಅರಣ್ಯಕ್ಕೂ ಅನ್ಯೋನ್ಯ ಸಂಬಂಧವಿದ್ದು, ಇಂದು ರಕ್ಷಿತಾರಣ್ಯಗಳ ಉಳಿವಿಗೆ ಸರ್ವೋಚ್ಛ ನ್ಯಾಯಾಲಯದ ತೀರ್ಪೆ ಕಾರಣ. ನ್ಯಾಯಾಲಯದ ಹಸುರು ಪರ ಆದೇಶದಿಂದ ಕಾಡುಗಳು ಇಂದಿಗೂ ಅತಿಕ್ರಮಣದಿಂದ ಮುಕ್ತವಾಗಿವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಜಿ. ಶ್ರೀನಿವಾಸ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಸುಚೇತ ಸ್ವಾಗತಿಸಿದರು. ವಲಯ ಅರಣ್ಯಾಧಿಕಾರಿ ಕ್ಲಿಪರ್ಡ್ ಲೋಬೋ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಹರ್ಷಿತಾ ಹಾಗೂ ಡಾ.ಯೋಗೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಡಾ.ನಾಗರಾಜ್ ಎಸ್. ವಂದಿಸಿದರು.







