ಸಂಖ್ಯಾಸ್ತ್ರಜ್ಞರ ಹುದ್ದೆ ಐದು ತಿಂಗಳಿಂದ ಖಾಲಿ
ಹೊಸದಿಲ್ಲಿ, ಜೂ.14: ದೇಶದ ಮುಖ್ಯ ಸಂಖ್ಯಾಶಾಸ್ತ್ರಜ್ಞರ ಹುದ್ದೆ ಸುಮಾರು ಐದು ತಿಂಗಳಿಂದ ಖಾಲಿಯಿರುವ ಕಾರಣ ದೇಶದ ಕುರಿತು ವಿಶ್ವಸನೀಯ ಆರ್ಥಿಕ ದತ್ತಾಂಶಗಳನ್ನು ಪಡೆಯುವ ಕಾರ್ಯ ಇದೀಗ ಜಟಿಲಗೊಂಡಿದೆ. ಕೇಂದ್ರ ಸಂಖ್ಯಾಶಾಸ್ತ್ರ ಕಚೇರಿಯಲ್ಲಿ ಮುಖ್ಯ ಸಂಖ್ಯಾಶಾಸ್ತ್ರಜ್ಞರಾಗಿದ್ದ ಟಿಸಿಎ ಅನಂತ್ ಜನವರಿ 31ರಂದು ನಿವೃತ್ತರಾಗಿದ್ದು ಇವರ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಿಸಲು ಸರಕಾರ ಪ್ರಯತ್ನ ನಡೆಸುತ್ತಿದೆ. ಹಲವು ಅಭ್ಯರ್ಥಿಗಳನ್ನು ಸಂದರ್ಶನ ನಡೆಸಲಾಗಿದ್ದರೂ ಅಂತಿಮ ಆಯ್ಕೆಯನ್ನು ಪ್ರಧಾನಿಯವರ ಕಚೇರಿ ನಡೆಸಬೇಕಿದೆ. ಭಾರತದಲ್ಲಿ ದೊರಕುವ ಆರ್ಥಿಕ ಮಾಹಿತಿಗಳು ವಿಶ್ವಸನೀಯವಲ್ಲ ಹಾಗೂ ಅಪೂರ್ಣವಾಗಿವೆ ಎಂಬ ವರದಿಯಿಂದ ಈಗಾಗಲೇ ಸಂಸ್ಥೆಯ ಪ್ರತಿಷ್ಟೆಗೆ ಹಾನಿಯಾಗಿದೆ.
1.3 ಬಿಲಿಯ ಜನಸಂಖ್ಯೆ ಹೊಂದಿರುವ ಮತ್ತು 2.3 ಲಕ್ಷ ಕೋಟಿ ರೂ. ಅರ್ಥವ್ಯವಸ್ಥೆ ಇರುವ ದೇಶದಲ್ಲಿ (ಗ್ರಾಮೀಣ ಮತ್ತು ಅಸಾಂಪ್ರದಾಯಿಕ ವರ್ಗದ ಜನತೆ ಹೆಚ್ಚಿರುವ) ಸಕಾಲಿಕ ಹಾಗೂ ನಿಖರ ಮಾಹಿತಿ ಸಂಗ್ರಹಿಸುವುದು ಮಹತ್ತರ ಕಾರ್ಯವಾಗಿದೆ. ಸಂಖ್ಯಾಶಾಸ್ತ್ರಜ್ಞರ ಹುದ್ದೆ ಖಾಲಿ ಇರುವುದು ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು 2007ರಲ್ಲಿ ಭಾರತದ ಪ್ರಪ್ರಥಮ ಸಂಖ್ಯಾಶಾಸ್ತ್ರಜ್ಞನಾಗಿ ನೇಮಕಗೊಂಡಿದ್ದ ಪ್ರಣವ್ ಸೇನ್ ತಿಳಿಸಿದ್ದಾರೆ. ಆದರೆ ನೇಮಕ ಪ್ರಕ್ರಿಯೆ ಕುರಿತು ಸಂಖ್ಯಾಶಾಸ್ತ್ರ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದ ರಮಣ್ ಸಿಂಗ್ ನೇತೃತ್ವದ ಸರಕಾರ ಭಿಲಾಯ್‌ಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಸ್ಥಾಪಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದಿನ ಯುಪಿಎ ಸರಕಾರ ತಿರಸ್ಕರಿಸಿತ್ತು. ಆದರೆ ನಾವು ಈಗ ಭಿಲಾಯ್‌ಯಲ್ಲಿ ಐಐಟಿಗೆ ಶಿಲಾನ್ಯಾಸ ನೆರವೇರಿಸಿದ್ದೇವೆ ಎಂದು ಮೋದಿ ಹೇಳಿದರು.







