‘ಚುಟುಕು ಸಾಹಿತ್ಯ ಸಿರಿ’ ಪ್ರಶಸ್ತಿ ಪ್ರದಾನ

ಮಂಗಳೂರು, ಜೂ.14: ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಯ ಸಂಚಾಲಕ ಹಾಗೂ ಕೊಂಕಣಿ ಚುಟುಕು ಸಾಹಿತಿ ಜನಾರ್ದನ ವಾಸುದೇವ ಭಟ್ ಅವರನ್ನು ಇತ್ತೀಚೆಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಚುಟುಕು ಸಾಹಿತ್ಯ ಸಿರಿ’ ಪ್ರಶಸ್ತಿ ನೀಡುವ ಮೂಲಕ ಗೌರಸಲಾಯಿತು.
ನರಿಕೊಂಬು ಗ್ರಾಮದ ಮೊಗರ್ನಾಡು ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಏರ್ಯಲಕ್ಷ್ಮೀ ನಾರಾಯಣ ಆಳ್ವ ಹಾಗೂ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಪ್ರೊ ಎ.ವಿ. ನಾವಡ, ಕಸಾಪ ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ಮೋಹನ್ ರಾವ್, ಯಕ್ಷಗಾನ ಪ್ರಸಂಗಕರ್ತ ನಿತ್ಯಾನಂದ ಕಾರಂತ ಪೊಳಲಿ, ಜನಾರ್ದನ ಹಂದೆ, ಪೊಳಲಿ ಅನಂತ ಭಟ್ ಉಪಸ್ಥಿತರಿದ್ದರು.
Next Story





