ಉತ್ತರಪ್ರದೇಶದಲ್ಲಿ ಧೂಳಿನ ಬಿರುಗಾಳಿ : 7 ಸಾವು

ಲಕ್ನೋ, ಜೂ. 14: ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಬೀಸಿದ ಧೂಳಿನ ಬಿರುಗಾಳಿಗೆ ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ 21 ಮಂದಿ ಗಾಯಗೊಂಡಿದ್ದಾರೆ. ‘‘ಕಳೆದ 24 ಗಂಟೆಗಳಲ್ಲಿ ಬೀಸಿದ ಧೂಳಿನ ಬಿರುಗಾಳಿಗೆ ಏಳು ಮಂದಿ ಮೃತಪಟ್ಟಿದ್ದಾರೆ. ಗೋಂಡಾ ಹಾಗೂ ಸೀತಾಪುರದಲ್ಲಿ ತಲಾ ಮೂರು ಮಂದಿ ಮೃತಪಟ್ಟಿದ್ದಾರೆ. ಗಾಝಿಯಾಬಾದ್‌ಲ್ಲಿ ಓರ್ವ ಮೃತಪಟ್ಟಿದ್ದಾರೆ.’’ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ‘‘ಫೈಝಾಬಾದ್‌ನಲ್ಲಿ 11 ಮಂದಿ ಹಾಗೂ ಸೀತಾಪುರದಲ್ಲಿ 10 ಮಂದಿ ಗಾಯಗೊಂಡಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಧೂಳಿನ ಬಿರುಗಾಳಿಯಿಂದ ಉಂಟಾಗಿರುವ ಅನಾಹುತ ಪರಿಗಣಿಸಿ ಮುಖ್ಯಮಂತ್ರಿ ಆದಿತ್ಯನಾಥ್, ಗಾಯಗೊಂಡಿರುವವರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಜಿಲ್ಲಾ ಮ್ಯಾಜಿಸ್ಟೇಟ್‌ಗೆ ಆದೇಶಿಸಿದ್ದಾರೆ. ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಹಾರ ನೀಡುವಂತೆ ಕೂಡ ಅವರು ಆದೇಶಿಸಿದ್ದಾರೆ. ಮೃತಪಟ್ಟವರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಅವರು, ಧೂಳಿನ ಬಿರುಗಾಳಿ ಹಾಗೂ ಸಂಬಂಧಿತ ಘಟನೆಗಳಲ್ಲಿ ತೊದರೆಗೀಡಾದವರಿಗೆ ಸರಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದಿದ್ದಾರೆ.





