ಚುನಾವಣೆ ಸಂದರ್ಭ ಪೊಲೀಸ್ ಅಧಿಕಾರಿಗಳ ವರ್ಗಾವಣೆ: ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗಳಿಗೆ ಮರು ನಿಯೋಜನೆ
ಮಂಗಳೂರು, ಜೂ. 14: ವಿಧಾನಸಭಾ ಚುನಾವಣೆ ಸಂದರ್ಭ ವರ್ಗಾವಣೆಗೊಂಡಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗಳಿಗೆ ಮರು ನಿಯೋಜನೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಮಂಗಳೂರು ನಗರ ಅಪರಾಧ ಪತ್ತೆದಳದಿಂದ ಮೈಸೂರು ನಗರ ಠಾಣೆಗೆ ವರ್ಗಾವಣೆಗೊಂಡಿದ್ದ ಇನ್‌ಸ್ಪೆಕ್ಟರ್ ಶಾಂತಾರಾಮ, ಮಂಗಳೂರು ನಗರ ವೆಸ್ಟ್ ಟ್ರಾಫಿಕ್‌ನಿಂದ ಮೈಸೂರು ವಿವಿ ಪುರಂ ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದ ಇನ್‌ಸ್ಪೆಕ್ಟರ್ ಅಮಾನುಲ್ಲಾ ಎ., ಬಂದರು ಠಾಣೆಯಿಂದ ಮೈಸೂರು ಕುವೆಂಪು ನಗರ ಠಾಣೆಗೆ ವರ್ಗಾವಣೆಗೊಂಡಿದ್ದ ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್, ಮೈಸೂರು ನರಸಿಂಹರಾಜ ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕೆ., ಬ್ರಹ್ಮಾವರಕ್ಕೆ ವರ್ಗಾವಣೆಗೊಂಡಿದ್ದ ಮುಲ್ಕಿ ಠಾಣೆಯ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ, ಉಡುಪಿ ನಗರ ಠಾಣೆಗೆ ವರ್ಗಾವಣೆಗೊಂಡಿದ್ದ ಮಂಗಳೂರು ಉತ್ತರ ಸಂಚಾರಿ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ, ಕೊಣಾಜೆ ಠಾಣೆಯಲ್ಲಿದ್ದ ಪ್ರಕಾಶ್ ಬಿ.ಎಸ್.ಮೈಸೂರು ಕೃಷ್ಣರಾಜ ಠಾಣೆಗೆ, ಲೋಕಾಯುಕ್ತದಿಂದ ಮೂಡುಬಿದಿರೆ ಠಾಣೆಗೆ ವರ್ಗಾವಣೆಗೊಂಡಿದ್ದ ವಿಜಯ ಪ್ರಸಾದ್. ಐಎಸ್‌ಡಿಯಿಂದ ಮಣಿಪಾಲ ಠಾಣೆಗೆ ವರ್ಗಾವಣೆಗೊಂಡಿದ್ದ ತಿಮ್ಮಪ್ಪ ನಾಕ್, ಮಣಿಪಾಲ ಠಾಣೆಯಿಂದ ಉರ್ವ ಠಾಣೆಗೆ ವರ್ಗಾವಣೆಗೊಂಡಿದ್ದ ಸುದರ್ಶನ್, ಭಟ್ಕಳ ವೃತ್ತದಿಂದ ಮಂಗಳೂರು ನಗರ ಉತ್ತರ ಸಂಚಾರ ಠಾಣೆಗೆ ವರ್ಗಾವಣೆಗೊಂಡಿದ್ದ ಕುಮಾರಸ್ವಾಮಿ, ಮೈಸೂರು ಮೇಟಗಳ್ಳ ಠಾಣೆಯಿಂದ ಕದ್ರಿ ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದ ಸುನಿಲ್ ಕುಮಾರ್ ಎಚ್.ಟಿ., ಮಂಗಳೂರು ಎಸಿಬಿಯಿಂದ ಬಂದರು ಠಾಣೆಗೆ ವರ್ಗಾವಣೆಗೊಂಡಿದ್ದ ಯೋಗೀಶ್ ಕುಮಾರ್, ಉಡುಪಿ ನಗರದಿಂದ ಪಣಂಬೂರು ಠಾಣೆಗೆ ವರ್ಗಾವಣೆಗೊಂಡಿದ್ದ ನವೀನ್‌ಚಂದ್ರ ಜೋಗಿ, ಬ್ರಹ್ಮಾವರ ಠಾಣೆಯಿಂದ ಮುಲ್ಕಿ ಠಾಣೆಗೆ ವರ್ಗಾವಣೆಗೊಂಡಿದ್ದ ಶ್ರೀಕಾಂತ್ ಕೆ., ಮೈಸೂರು ದೇವರಾಜ ಠಾಣೆಯಿಂದ ವೆಸ್ಟ್ ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದ ತಿಮ್ಮರಾಜು, ಮಂಗಳೂರು ಮಹಿಳಾ ಠಾಣೆಯಿಂದ ಉಡುಪಿ ಮಹಿಳಾ ಠಾಣೆಗೆ ವರ್ಗಾವಣೆಗೊಂಡಿದ್ದ ಕಲಾವತಿ ಮೊದಲಾದವರನ್ನು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡಿದ್ದ ಎಸಿಪಿ ಹಾಗೂ ಪಿಎಸ್‌ಐಗಳ ಮರು ನಿಯೋಜನೆ ಆದೇಶ ಇನ್ನಷ್ಟೇ ಹೊರ ಬೀಳಬೇಕಾಗಿದೆ. ಎಸಿಪಿ ಹಂತದ ಅಧಿಕಾರಿಗಳ ಮರು ನಿಯೋಜನೆ ಆದೇಶ ಸರಕಾರದ ಮಟ್ಟದಲ್ಲಿ ಆಗಲಿದ್ದು, ಪಿಎಸ್‌ಐಗಳ ವರ್ಗಾವಣೆ ಆದೇಶವನ್ನು ಪಶ್ಚಿಮ ವಲಯ ಐಜಿಪಿ ಅವರು ಹೊರಡಿಸಲಿದ್ದಾರೆ.





