ಬೆಂಗಳೂರಿನಲ್ಲಿ ಈದ್ ಆಚರಿಸಿದ ಅಫ್ಘಾನಿಸ್ತಾನ ಕ್ರಿಕೆಟಿಗರು
ಬೆಂಗಳೂರು, ಜೂ.15: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸದಸ್ಯರು ಶುಕ್ರವಾರ ಬೆಳಗ್ಗೆ ಈದ್ ಹಬ್ಬದ ಸಂಭ್ರಮ ಆಚರಿಸಿಕೊಳ್ಳುವ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಬ್ಬದ ಕಳೆ ತಂದರು.
ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದ ಅಫ್ಘಾನಿಸ್ತಾನ ತಂಡದ ಎಲ್ಲ ಸದಸ್ಯರು ಮೈದಾನದಲ್ಲಿ ಒಟ್ಟಿಗೆ ಸೇರಿ ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ನಾಯಕ ಅಸ್ಗರ್ ಸ್ಟಾನಿಕ್ಝೈ, ರಶೀದ್ ಖಾನ್, ಮುಹಮ್ಮದ್ ಶಹಝಾದ್ ಹಾಗೂ ಇತರ ಸದಸ್ಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಚಿತ್ರವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಹಬ್ಬದ ಸಂಭ್ರಮವನ್ನು ಆಚರಿಸಿಕೊಂಡ ಬೆನ್ನಿಗೇ ಅಫ್ಘಾನ್ ಆಟಗಾರರು ಭಾರತ ವಿರುದ್ಧ ಐತಿಹಾಸಿಕ ಏಕೈಕ ಟೆಸ್ಟ್ನ ಎರಡನೇ ದಿನದಾಟಕ್ಕೆ ಸಜ್ಜಾದರು.
Next Story