ಉಡುಪಿ: ಈದುಲ್ ಫಿತ್ರ್ ವಿಶೇಷ ನಮಾಝ್

ಉಡುಪಿ, ಜೂ.15: ಇಲ್ಲಿನ ಜಾಮಿಯಾ ಮಸೀದಿಯಲ್ಲಿ ಬೆಳಗ್ಗೆ 8.30ಕ್ಕೆ ವೌಲಾನಾ ಅಬ್ದುರ್ರಶೀದ್ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮನ್ ಮಸೀದಿಯಲ್ಲಿ ಬೆಳಗ್ಗೆ 9 ಗಂಟೆಗೆ ವೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನೆರವೇರಿತು.ಕಾರ್ಕಳ, ಕುಂದಾಪುರ, ಬೈಂದೂರು ಸೇರಿದಂತೆ ವಿವಿಧ ಮಸೀದಿಗಳಲ್ಲಿ ಈದ್ ವಿಶೇಷ ನಮಾಝ್ ನಿರ್ವಹಿಸಿದ ಮುಸ್ಲಿಂ ಬಾಂಧವರು ಬಳಿಕ ಪರಸ್ಪರ ಈದ್ ಶುಭಾಶಯ ಕೋರಿಕೊಂಡರು.ಮುಸ್ಲಿಮೇತರರಿಗೆ ಸಿಹಿ ಹಂಚಿ ಹಬ್ಬ ಆಚರಣೆಉಡುಪಿಯ ನಾಯರ್‌ಕೆರೆ ಹಾಶಿಮಿ ಮಸೀದಿಯಲ್ಲಿ ಬೆಳಗ್ಗೆ 8.30ಕ್ಕೆ ವೌಲಾನಾ ಹಾಶ್ಮಿ ಉಮ್ರಿ ದುವಾಶೀರ್ವಚನ ನೀಡಿ, ಈದ್ ಫಿತ್ರ್ ಆಚರಣೆಯ ಮಹತ್ವವನ್ನು ಸಾರಿದರು.ಈ ಬಳಿಕ ವೌಲಾನಾ ಹಾಶ್ಮಿ ನೇತೃತ್ವದಲ್ಲಿ ಮಸೀದಿಯ ಸಮಿತಿ ಸದಸ್ಯರು ಮುಸ್ಲಿಮೇತರರು ಹಾಗೂ ನೆರೆಹೊರೆಯ ಮನೆಗಳಿಗೆ ಭೇಟಿ ನೀಡಿ ಸಿಹಿ ಹಂಚಿ ಸಂಭ್ರಮಾಚರಿಸಿದರು.
Next Story





