ಈದ್ ಸಂಭ್ರಮಕ್ಕೆ ಬಿ.ಎಂ. ಫಾರೂಕ್‌ರಿಗೆ ಹೊಸ ಕಾರು!
3.65 ಕೋಟಿ ರೂ. ವೌಲ್ಯದ ಲ್ಯಾಂಡ್ ರೋವರ್

ಮಂಗಳೂರು, ಜೂ.15: ವಿಧಾನಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್‌ರವರು ಇಂದು ಹೊಸ ಐಷಾರಾಮಿ ಕಾರಿನೊಂದಿಗೆ ಈದುಲ್ ಫಿತ್ರ್ ಹಬ್ಬದ ಸಂಭ್ರಮವನ್ನು ಕುಟುಂಬದ ಜತೆ ಹಂಚಿಕೊಂಡರು.
3.65 ಕೋಟಿಯ ಲ್ಯಾಂಡ್ ರೋವರ್ ಬ್ರಾಂಡ್‌ನ ರೇಂಜ್ ರೋವರ್ ಆಟೋಬಯೋಗ್ರಫಿ ಐಷಾರಾಮಿ ಕಾರನ್ನು ಬಿ.ಎಂ. ಫಾರೂಕ್ ಖರೀದಿಸಿದ್ದಾರೆ.
ಮಂಗಳೂರು ಮಂಗಳೂರು ಫಿಝಾ ಮಾಲ್ನ ನೆಲ ಅಂತಸ್ತಿನಲ್ಲಿ ಇರಿಸಲಾಗಿದ್ದ ಕಾರನ್ನು ಗುರುವಾರ ಬಿ.ಎಂ. ಫಾರೂಕ್‌ರವರು ಪಡೆದುಕೊಂಡಿದ್ದರು.
ಇಂದು ಈದ್ ತಕ್ಬೀರ್ ಕೇಳಿದಾಕ್ಷಣ ಕೇಕ್ ಕತ್ತರಿಸಿ ಕುಟುಂಬ ಸದಸ್ಯರ ಜತೆ ಹೊಸ ಕಾರಿನ ಸಂತಸ ಹಂಚಿಕೊಂಡರು.
Next Story





