ಛತ್ತೀಸ್‌ಗಡದಲ್ಲಿ ಮೂವರು ನಕ್ಸಲರ ಹತ್ಯೆ

ರಾಯಪುರ,ಜೂ.15: ಸುಕ್ಮಾ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲರು ಕೊಲ್ಲಲ್ಪಟ್ಟಿದ್ದಾರೆ. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಚಿಂತಗುಫಾ ಪೊಲೀಸ್ ಠಾಣಾ ವ್ಯಾಪ್ತಿಯ ಗಟ್ಟಪಾಡ ಮತ್ತು ತೋಕನಪಲ್ಲಿ ಗ್ರಾಮಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲರು ಅವರತ್ತ ಗುಂಡು ಹಾರಿಸಿದ್ದರು. ಭದ್ರತಾ ಪಡೆಗಳು ಪ್ರತಿ ದಾಳಿಯನ್ನು ನಡೆಸಿದಾಗ ಮೂವರು ನಕ್ಸಲರು ಮೃತಪಟ್ಟಿದ್ದು,ಇತರರು ಪರಾರಿಯಾಗಿದ್ದಾರೆ ಎಂದು ಸುಕ್ಮಾ ಎಸ್‌ಪಿ ಅಭಿಷೇಕ್ ಮೀನಾ ತಿಳಿಸಿದರು. ಘಟನಾ ಸ್ಥಳದಿಂದ ರೈಫಲ್,ಪಿಸ್ತೂಲು ಮತ್ತು ಮಝಲ್ ಲೋಡಿಂಗ್ ಗನ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
Next Story





