ಉಡುಪಿ: ಹಿಂದೂಗಳ ಮನೆಗಳಿಗೆ ಸಿಹಿಹಂಚಿ ಹಬ್ಬದ ಶುಭಾಶಯ ಕೋರಿದ ನೆರೆಹೊರೆಯವರು

ಉಡುಪಿ, ಜೂ.15: ಉಡುಪಿ ನಾಯರ್‌ಕೆರೆ ಹಾಶ್ಮಿ ಮಸೀದಿಯಲ್ಲಿ ಇಂದು ಸಾಂಪ್ರದಾಯಿಕ ಸಂಭ್ರಮ, ಉತ್ಸಾಹದೊಂದಿಗೆ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಯಿತು.
ಬೆಳಗ್ಗೆ 8:30ಕ್ಕೆ ವೌಲಾನ ಹಾಶ್ಮಿ ಉಮ್ರಿ ದುವಾರ್ಶೀವಚನ ನೀಡಿ, ಈದುಲ್ ಪಿತ್ರ್ ಆಚರಣೆಯ ಮಹತ್ವವನ್ನು ಸಾರಿದರು. ಬಳಿಕ ವೌಲಾನಾ ಹಾಶ್ಮಿ ನೇತೃತ್ವದಲ್ಲಿ ಮಸೀದಿ ಸಮಿತಿಯ ಸದಸ್ಯರು ನೆರೆಹೊರೆಯ ಅನ್ಯಧರ್ಮೀಯರ ಮನೆಗಳಿಗೆ ಭೇಟಿ ನೀಡಿ ಸಿಹಿ ಹಂಚಿ, ಹಬ್ಬದ ಸಂಭ್ರಮ ವನ್ನು ಹಂಚಿಕೊಂಡರು.
Next Story





