ಕಾರಿಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ: ಮಗು ಸಹಿತ ಐವರು ಮೃತ್ಯು

ಬಳ್ಳಾರಿ, ಜೂ. 15: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಸ್ಥಳದಲ್ಲೆ ಸಾವನ್ನಪ್ಪಿದ ದುರ್ಘಟನೆ ಇಲ್ಲಿನ ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಕ್ರಾಸ್ ಬಳಿ ನಡೆಸಿದೆ.
ಕಾರಿನಲ್ಲಿದ್ದ ಓರ್ವ ಬಾಲಕ, ಇಬ್ಬರು ಯುವಕರು ಸೇರಿದಂತೆ ಐವರು ಮೃತಪಟ್ಟಿದ್ದು, ಮೃತರನ್ನು ದಾವಣಗೆರೆ ಮೂಲದವರು ಎಂದು ಗೊತ್ತಾಗಿದ್ದು, ಮೃತರ ಹೆಸರು-ವಿಳಾಸ ಇನ್ನೂ ತಿಳಿದು ಬಂದಿಲ್ಲ. ಬಳ್ಳಾರಿಯಿಂದ ಸಿರಗುಪ್ಪಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಕುರುಗೋಡು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಬಸ್ ಢಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಒಳಗೆ ಸಿಲುಕಿರುವ ದೇಹಗಳನ್ನು ಹೊರತೆಗೆಯಲು ಸಾರ್ವಜನಿಕರು ಮತ್ತು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಸಂಬಂಧ ಕುರುಗೋಡು ಠಾಣಾ ಪೊಲೀಸರು ಮೊಕದ್ದೆಮೆ ದಾಖಲಿಸಿಕೊಂಡಿದ್ದಾರೆ.





