ಧರ್ಮದ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜೀವಿಸುವುದು ಗುರಿಯಾಗಬೇಕು: ರಶೀದ್ ಹಾಜಿ
ಈದುಲ್ ಫಿತ್ರ್ ಪ್ರಯುಕ್ತ ಉಳ್ಳಾಲ ದರ್ಗಾದಲ್ಲಿ ನಮಾಝ್, ಝಿಯಾರತ್

ಉಳ್ಳಾಲ, ಜೂ. 15 : ಇಸ್ಲಾಂ ಧರ್ಮದ ತತ್ವಾದರ್ಶಗಳನ್ನು ಶರೀರದಲ್ಲಿ ಅಳವಡಿಸಿಕೊಂಡು ಜೀವಿಸುವುದು ಮುಸಲ್ಮಾನರಾದ ನಮ್ಮ ಗುರಿಯಾಗಿದೆ. ಇಸ್ಲಾಂ ಶಾಂತಿಯ ಧರ್ಮ, ಇಸ್ಲಾಂ ಧರ್ಮದಲ್ಲಿದ್ದುಕೊಂಡು ಶಾಂತಿ ಸೌಹಾರ್ದತೆಯಿಂದ ನಾವು ಬದುಕಬೇಕಾಗಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಹೇಳಿದರು.
ಅವರು ಈದುಲ್ ಫಿತ್ರ್ ಪ್ರಯುಕ್ತ ಉಳ್ಳಾಲ ದರ್ಗಾದಲ್ಲಿ ಈದ್ ನಮಾಝ್ ಮತ್ತು ದರ್ಗಾ ಝಿಯಾರತ್ ಬಳಿಕ ಈದ್ ಸಂದೇಶ ನೀಡಿದರು.
ಈದ್ ಸೌಹಾರ್ದತೆ ಮತ್ತು ಸಹಬಾಳ್ವೆಯ ಪ್ರತೀಕವಾಗಿದೆ. ನಾವು ಅದನ್ನು ಬೆಳೆಸಿಕೊಳ್ಳಬೇಕು. ನಾನು ಸಚಿವನಾದ ಬಳಿಕ ಆ ನಾಯಕ, ಈ ನಾಯಕ ಎಂದು ಎಲ್ಲೂ ಹೇಳಲಿಲ್ಲ. ಅಧಿಕಾರ ವಹಿಸಿದ ಬಳಿಕ ಜನ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ ಬಾರಿ ಆಹಾರ ಮತ್ತು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲೂ ಈ ಬಾರಿ ವಸತಿ ಖಾತೆ ಸಚಿವನಾದ ಸಂದರ್ಭದಲ್ಲೂ ಎಲ್ಲರಿಗೂ ಪೂರಕವಾಗಿ ಕೆಲಸ ಮಾಡಿದ್ದೇನೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಈ ಸಂದರ್ಭ ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹ ಮುಹಮ್ಮದ್, ಉಪಾಧ್ಯಕ್ಷ ಬಾವ ಮುಹಮ್ಮದ್, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಚಾರಿಟೇಬಲ್ ಟ್ರಸ್ಟ್ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ್, ಮುಸ್ತಫ ಮಂಚಿಲ, ಆಯ್ಯೂಬ್ ಮಂಚಿಲ, ಮಹ್ಮೂದ್ ಅಳೇಕಲ, ಇಬ್ರಾಹೀಮ್ ಹಾಜಿ ಉಳ್ಳಾಲ ಬೈಲು, ನಗರಸಭಾ ಅಧ್ಯಕ್ಷ ಕುಂಞಿ ಮೋನು, ಮಾಜಿ ಪುರಸಭಾ ಅಧ್ಯಕ್ಷ ಬಾಜಿಲ್‌ಡಿಸೋಜ, ಇಸ್ಮಾಯೀಲ್ ಅಳೇಕಲ, ಮತ್ತು ಇನ್ನಿತರರು ಉಪಸ್ಥಿತರಿದ್ದರು







