ಟಯರ್ ಸ್ಪೋಟ: ಸ್ಕೂಟರ್‌ನ ಸಹಸವಾರ ಮೃತ್ಯು

ಉಡುಪಿ, ಜೂ. 15: ಸ್ಕೂಟರ್ ಹಿಂದಿನ ಟಯರ್ ಸ್ಪೋಟಗೊಂಡ ಪರಿಣಾಮ ರಸ್ತೆಗೆ ಅಪ್ಪಳಿಸಿದ ಹಿಂಬದಿಯ ಸವಾರ ಚಿಕಿತ್ಸೆಗೆ ಸ್ಪಂದಿಸದೇ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶುಕ್ರವಾರ ಮೃತರಾಗಿದ್ದಾರೆ.
ಮೃತರನ್ನು ಬೈಝೆ ಇಸ್ಮಾಯಿಲ್ ಸಾಹೇಬ್ ಎಂದು ಗುರುತಿಸಲಾಗಿದೆ.
ಗುರುವಾರ ಮಧ್ಯಾಹ್ನ ಮುಹಮ್ಮದ್ ಶಾಹೀರ್ ಅವರೊಂದಿಗೆ ಸಹಸವಾರರಾಗಿ ಸ್ಕೂಟರ್‌ನಲ್ಲಿ ತೆರಳಿದ್ದ ವೇಳೆ ಬಡಾನಿಡಿಯೂರು ಗ್ರಾಮ ಹಂಪನಕಟ್ಟೆ ಜಂಕ್ಷನ್‌ನಲ್ಲಿ ಘಟನೆ ಸಂಭವಿಸಿದೆ.
ಹಿಂದಿನ ಟಯರ್ ಬ್ಲಾಸ್ಟ್ ಆದ ಪರಿಣಾಮ ಇಸ್ಮಾಯಿಲ್ ರಸ್ತೆಗೆ ಬಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಸ್ಕೂಟರ್ ನಿಲ್ಲಿಸಲು ಬ್ರೇಕ್ ಹಾಕಿದ ಶಾಹೀರ್ ಸ್ಕೂಟರ್ ಸಮೇತ ಬಿದ್ದು ಸಣ್ಣಪುಟ್ಟ ಗಾಯವಾಗಿತ್ತು. ಇವರನ್ನು ಕೆಎಂಸಿ ಆಸ್ಪತ್ರೆ ದಾಖಲಿಸಿದ್ದು, ಇಸ್ಮಾಯಿಲ್ ಚಿಕಿತ್ಸೆಗೆ ಸ್ಪಂದಿಸದೇ ಮೃತರಾಗಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





