ಜೂ. 17: 'ಇನ್ ಲ್ಯಾಂಡ್ ಎಸ್ಟೋರಿಯ' ಉದ್ಘಾಟನೆ

ಮಂಗಳೂರು, ಜೂ. 16: ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇನ್ ಲ್ಯಾಂಡ್ ಗ್ರೂಪ್ ಸಂಸ್ಥೆಯು ತನ್ನದೇ ಆದ ಹೆಗ್ಗುರುತನ್ನು ಹೊಂದಿದ್ದು, ಮಂಗಳೂರಿನ ಜನತೆಗೆ ತನ್ನ ಮತ್ತೊಂದು ಕೊಡುಗೆಯನ್ನು ಅನಾವರಣಗೊಳಿಸಲು ಸಿದ್ಧವಾಗಿದೆ.
ನಗರದ ಬಿಷಪ್ ವಿಕ್ಟರ್ ರೋಡ್, ವೆಲೆನ್ಶಿಯಾದಲ್ಲಿ ನೂತನ ಶೈಲಿಯ ವಿನ್ಯಾಸದೊಂದಿಗೆ ರೂಪುಗೊಂಡಿರುವ 'ಇನ್ ಲ್ಯಾಂಡ್ ಎಸ್ಟೋರಿಯ' ವಸತಿ ಸಮುಚ್ಚಯವನ್ನು ಜೂ. 17 ರಂದು ಅಪರಾಹ್ನ 12.30ಕ್ಕೆ ನಲಪಾಡ್ ಗ್ರೂಪಿನ ಅಧ್ಯಕ್ಷ ಎನ್ ಎ ಮುಹಮ್ಮದ್ ಅವರು ಉದ್ಘಾಟಿಸಲಿದ್ದಾರೆ. ಕುನಿಲ್ ಗ್ರೂಪಿನ ಅಧ್ಯಕ್ಷ ಡಾ. ಫಕ್ರುದ್ದೀನ್ ಕುನಿಲ್ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದು ಇನ್ ಲ್ಯಾಂಡ್ ಗ್ರೂಪ್ ನ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದ್ದಾರೆ.
ಇನ್ ಲ್ಯಾಂಡ್ ಎಸ್ಟೋರಿಯ ಆಕರ್ಷಕ ವಿನ್ಯಾಸ, ಉತ್ತಮ ಗುಣಮಟ್ಟ ಹಾಗೂ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಈ ವಸತಿ ಸಮುಚ್ಚಯದಲ್ಲಿ 5 ಅಂತಸ್ತಿನ 2 BHK, 3 BHK ಗಳ 35 ಫ್ಲಾಟ್ ಗಳು ಸುಂದರವಾಗಿ ರೂಪುಗೊಂಡಿದ್ದು, ವಿಶಾಲವಾದ ಲಾಬಿ, ಸಂದರ್ಶಕರ ಲಾಂಜ್, ಇಂಟರ್ ಕಾಮ್ ವ್ಯವಸ್ಥೆ, ಜಿಮ್ನೇಶಿಯಂ, ಸಿಸಿಟಿವಿ, ಜನರೇಟರ್ ಬ್ಯಾಕ್ ಅಪ್, ಡಬಲ್ ಎಲಿವೇಟರ್ ಹಾಗೂ ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಲ್ಲದೇ ನಿತ್ಯ ಜೀವನಕ್ಕೆ ಅತ್ಯಗತ್ಯವಿರುವ ಮಾರುಕಟ್ಟೆ, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು, ಮನರಂಜನಾ ಕೇಂದ್ರಗಳು, ಆಸ್ಪತ್ರೆಗಳು ಈ ವಸತಿ ಸಮುಚ್ಚಯದ ಅನತಿ ದೂರದಲ್ಲಿವೆ. ಈ ವಸತಿ ಸಮುಚ್ಚಯದ ಎಲ್ಲಾ ಫ್ಲಾಟ್ ಗಳು ಮಾರಾಟಗೊಂಡಿದ್ದು ಇಲ್ಲಿ ನೆಲೆಸಲಿರುವ ನಿವಾಸಿಗಳಿಗೆ ಅತ್ಯುತ್ತಮ ಭವಿಷ್ಯಕ್ಕಾಗಿ ಸಿರಾಜ್ ಅಹ್ಮದ್ ಅವರು ಶುಭ ಹಾರೈಸಿದ್ದಾರೆ.
ಇನ್ ಲ್ಯಾಂಡ್ ನ ಪ್ರತಿಯೊಂದು ವಸತಿ ಹಾಗೂ ವಾಣಿಜ್ಯ ಯೋಜನೆಗಳು ವ್ಯೂಹಾತ್ಮಕ ಹಾಗೂ ಆಕರ್ಷಕ ವಿನ್ಯಾಸಗಳ ವಸತಿ ಸಮುಚ್ಚಯಗಳ ಮೂಲಕ ಗ್ರಾಹಕರ ಪ್ರೀತಿ ಹಾಗೂ ವಿಶ್ವಾಸಕ್ಕೆ ಪಾತ್ರವಾಗಿವೆ. ಈ ಸಂಸ್ಥೆಯು ನಿರ್ಮಾಣ ಕ್ಷೇತ್ರದ ನುರಿತ ತಜ್ಞರ ತಂಡವನ್ನು ಹೊಂದಿದ್ದು ಅತ್ಯುತ್ತಮವಾದ ಮಾದರಿ ಕಟ್ಟಡಗಳನ್ನು ನಿರ್ಮಿಸಿದೆ. ಈ ಸಂಸ್ಥೆಯು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಈಗಾಗಲೇ 40 ಕ್ಕಿಂತಲೂ ಅಧಿಕ ವಸತಿ ಹಾಗೂ ವಾಣಿಜ್ಯ ಸಂರ್ಕೀಣಗಳನ್ನು ಯಶಸ್ವಿಯಾಗಿ ನಿರ್ಮಿಸಿದೆ.
ಮಂಗಳೂರಿನ ಕೂಳೂರು ಕಾವೂರು ರಸ್ತೆಯಲ್ಲಿ ಇನ್ ಲ್ಯಾಂಡ್ ಸನ್ ಲೈಟ್ ಮೂನ್ ಲೈಟ್, ಪಿಂಟೋಸ್ ಲೇನ್ ನಲ್ಲಿ ಇನ್ ಲ್ಯಾಂಡ್ ಅಪಿರಾನ್ ಮತ್ತು ಪುತ್ತೂರಿನಲ್ಲಿ ಇನ್ ಲ್ಯಾಂಡ್ ಮಯೂರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಲ್ಲಿ ಇನ್ ಲ್ಯಾಂಡ್ ಎಡಿಲಾನ್ನ ಕಾಮಗಾರಿಯು ತ್ವರಿತ ಗತಿಯಲ್ಲಿ ಸಾಗುತ್ತಿದ್ದು ಕೆಲವೇ ತಿಂಗಳುಗಳಲ್ಲಿ ಲೋರ್ಕಾಪಣೆಗೊಳ್ಳಲಿದೆ ಹಾಗೂ ಶೀಘ್ರದಲ್ಲಿಯೇ ಈ ಸಂಸ್ಥೆಯು ಮಂಗಳೂರಿನ ಕದ್ರಿ ಕಂಬ್ಳದಲ್ಲಿ “ಇನ್ ಲ್ಯಾಂಡ್ ಎಂಬರ್” ವಸತಿ ಸಮುಚ್ಚಯದ ಶಿಲಾನ್ಯಾಸಗೊಳ್ಳಲಿದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
2017 ರಲ್ಲಿ ಪರಿಚಯಿಸಲ್ಪಟ್ಟ ಹೊಸ ಮಸೂದೆಗಳಾದ GST ಮತ್ತು RERA ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಮಸೂದೆಗಳು ರಿಯಲ್ ಎಸ್ಟೇಟ್ ಉದ್ಯಮ ಮತ್ತು ನಿರ್ಮಾಣ ವಲಯಗಳಿಗೆ ಸಂಬಂಧಿಸಿದ ಕಾನೂನು ಹಾಗೂ ನಿಯಮಗಳಲ್ಲಿ ಮಾರ್ಪಾಡನ್ನು ತಂದಿದೆ. ಈ ಮಸೂದೆಗಳಲ್ಲಿ ಉಂಟಾದ ರಚನಾತ್ಮಕ ಬದಲಾವಣೆ ಮತ್ತು ನೀತಿಗಳಲ್ಲಿ ಸುಧಾರಣೆಗಳು ಭಾರತದ ರಿಯಲ್ ಎಸ್ಟೇಟ್ ಉದ್ಯಮ ಮತ್ತು ನಿರ್ಮಾಣ ವಲಯಗಳಿಗೆ ಹೊಸತನದ ಆಯಾಮವನ್ನು ತಂದು ಕೊಟ್ಟಿದೆ ಅಲ್ಲದೆ ಮನೆ ಖರೀದಿದಾರರಿಗೆ ಪಾರರ್ದಶಕತೆಯ ವ್ಯವಹಾರ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಇನ್ ಲ್ಯಾಂಡ್ ಸಂಸ್ಥೆಯು ದುಬೈಯಲ್ಲಿ ತನ್ನ ಮಾರ್ಕೆಟಿಂಗ್ ಕಚೇರಿಯನ್ನು ತೆರೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿ ಗಲ್ಫ್ ಎನ್ ಆರ್ ಐ ಹೂಡಿಕೆದಾರರ ಅಗತ್ಯಗಳನ್ನು ಪೂರೈಸುತ್ತಿದ್ದು, ವಿದೇಶದಲ್ಲಿ ನೆಲೆಸಿರುವ ಮಂಗಳೂರಿಗರು ಸಂಸ್ಥೆಯ ಈ ಕ್ರಮವನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ. ಇದಲ್ಲದೆ ಇನ್ ಲ್ಯಾಂಡ್ ಸಂಸ್ಥೆಯು ಭವಿಷ್ಯದಲ್ಲಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ತನ್ನ ಹೊಸ ಯೋಜನೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಇನ್ ಲ್ಯಾಂಡ್ ಸಂಸ್ಥೆಯು ತನ್ನ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಯೋಜನೆಗಳ ನಿರ್ಮಾಣದಲ್ಲಿ ನವೀನತೆ, ವಿಕಸನ, ಪರಿಪೂರ್ಣತೆ, ಗುಣಮಟ್ಟದಲ್ಲಿನ ನಿಲುವಿಗೆ ಹಾಗೂ ಶ್ರೇಷ್ಠತೆಯ ಅನ್ವೇಷಣೆಗೆ ಬದ್ಧವಾಗಿದೆ.
ಹೆಚ್ಚಿನ ಮಾಹಿತಿಗಾಗಿ www.inlandbuilders.net & 9972089099 ಅನ್ನು ಸಂಪರ್ಕಿಸಬಹುದಾಗಿದೆ.








