ಆಳ್ವಾಸ್‌ನ 55 ವಿದ್ಯಾರ್ಥಿಗಳು ಎನ್‌ಡಿಎ ಗೆ ಆಯ್ಕೆ

ಮೂಡುಬಿದಿರೆ, ಜೂ.16: ಕೇಂದ್ರ ಲೋಕಸೇವಾ ಆಯೋಗ ಯುಪಿಎಸ್‌ಸಿ ನಡೆಸುವ ಎನ್ ಡಿ ಎ ಅರ್ಹತಾ ಪರೀಕ್ಷೆಯಲ್ಲಿ ಆಳ್ವಾಸ್‌ನ 55 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಪುಣೆಯ ಕಡಕ್‌ವಾಸ್ಲದಲ್ಲಿರುವ ಎನ್‌ಡಿಎ ತರಬೇತಿ ಸಂಸ್ಥೆಯಲ್ಲಿ ಬಿ.ಟೆಕ್ ಅಥವಾ ಬಿ.ಎಸ್.ಸಿ ಪದವಿಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುವ ಎನ್‌ಡಿಎ ಪರೀಕ್ಷೆಗೆ ದೇಶಾದ್ಯಂತ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 8,363 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮುಂದಿನ ಹಂತದಲ್ಲಿ ನಡೆಯುವ ಎಸ್‌ಎಸ್‌ಬಿ ಸುತ್ತಿಗೆ ಭಾಗವಹಿಸುವ ಅರ್ಹತೆ ಪಡೆದಿರುತ್ತಾರೆ.
900 ಅಂಕಗಳಿಗೆ ನಡೆಯುವ ಪರೀಕ್ಷೆಯಲ್ಲಿ 300 ಅಂಕಗಳಿಗೆ ಗಣಿತದ ಪ್ರಶ್ನೆಗಳೇ ಬರುವುದು ವಿದ್ಯಾರ್ಥಿಗಳಿಗಿರುವ ದೊಡ್ಡ ಸವಾಲು. ನಮ್ಮ ಸಂಸ್ಥೆಯಲ್ಲಿ ಇದಕ್ಕಾಗಿ ನಡೆದ ನಿರಂತರ ಭೋಧನೆ, ಸೇನಾ ಅಧಿಕಾರಿಗಳ ವಿಶೇಷ ಉಪನ್ಯಾಸ ಹಾಗೂ ಮಾದರಿ ಪರೀಕ್ಷೆಗಳು ಈ ಯಶಸ್ಸಿಗೆ ಕಾರಣವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಸಾಧಕ ವಿದ್ಯಾರ್ಥಿಗಳು: ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಮಹೇಶ್ ಕೊಪ್ಪದ್, ಸೌರವ ಪಪ್ತಿ, ಮಂಜುನಾಥ್, ಪ್ರವೀಣ್ ಕೆ.ಪಾಟೀಲ್, ಶುಭಾನಹಮ್ಮದ್ ಬಿ ಲಬ್ಬಿ, ಶಬರೀಶ್ ಮದ್ದೊಡಿ, ಹಲ್ಲಪ್ಪಗೌಡ ಹೊಸಹಳ್ಳಿ, ಸುಮುಖ ಜಿ.ಸಿ, ಅಪ್ಪುಗೌಡ ಎಚ್.ಎಸ್, ಹೇಮಂತ್ ಸಿ.ಎಂ ಆರ್ಹತಾ ಪರೀಕ್ಷೆಗೆ ಆಯ್ಕೆಯಾದ ಟಾಪ್ 10 ವಿದ್ಯಾರ್ಥಿಗಳು.







