Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಡಪ್ಪಾಡಿ: ಹೃದಯಾಘಾತದಿಂದ ಎಎನ್‌ಎಫ್ ಯೋಧ...

ಮಡಪ್ಪಾಡಿ: ಹೃದಯಾಘಾತದಿಂದ ಎಎನ್‌ಎಫ್ ಯೋಧ ಮೃತ್ಯು

ನಕ್ಸಲ್ ಕೂಂಬಿಂಗ್ ತೆರಳಿದ್ದ ವೇಳೆ ಘಟನೆ

ವಾರ್ತಾಭಾರತಿವಾರ್ತಾಭಾರತಿ16 Jun 2018 10:28 PM IST
share
ಮಡಪ್ಪಾಡಿ: ಹೃದಯಾಘಾತದಿಂದ ಎಎನ್‌ಎಫ್ ಯೋಧ ಮೃತ್ಯು

ಸುಳ್ಯ, ಜೂ. 16: ಸುಳ್ಯ ತಾಲೂಕಿನ ಹಾಡಿಕಲ್ಲಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆಗೆ ತೆರಳಿದ್ದ ಎಎನ್‌ಎಫ್ ಪಡೆಯ ಯೋಧ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ರಂಗಸ್ವಾಮಿ (40) ಕಾಡಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ದ.ಕ., ಕೊಡಗು ಗಡಿಭಾಗದ ಕಡಮ ಕಲ್ಲು ರಕ್ಷಿತಾರಣ್ಯದ ಕಿಲಾರ್ ಮಲೆ ಮೀಸಲು ಅರಣ್ಯದಲ್ಲಿ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಮನೆಯೊಂದಕ್ಕೆ ಗುರುವಾರ ರಾತ್ರಿ ಶಂಕಿತ ನಕ್ಸಲರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಎಎನ್‌ಎಫ್ ಹಾಗೂ ಎಎನ್‌ಎಸ್ ಪಡೆ ಒಟ್ಟು ನಾಲ್ಕು ತಂಡ ಜಂಟಿಯಾಗಿ ಕೂಂಬಿಂಗ್ ಕಾರ್ಯಚರಣೆ ಆರಂಭಿಸಿತ್ತು. ಕಾರ್ಕಳ ಮತ್ತು ಭಾಗಮಂಡಲ ಘಟಕಗಳ ನಕ್ಸಲ್ ನಿಗ್ರಹ ಪಡೆ ಮತ್ತು ಎಎನ್‌ಎಸ್ ಸಿಬ್ಬಂದಿಗಳ ಒಟ್ಟು ನಾಲ್ಕು ತಂಡ ಶನಿವಾರ ಬೆಳಗ್ಗಿನಿಂದ ಕೂಂಬಿಂಗ್ ಕಾರ್ಯಚರಣೆಗೆ ಇಳಿದಿದ್ದು, ಇದರಲ್ಲಿ ಒಟ್ಟು 70 ಮಂದಿ ಯೋಧರು ಇದ್ದರು. ಅದರ ಒಂದು ತಂಡದಲ್ಲಿ ಇದ್ದ ರಂಗಸ್ವಾಮಿ (40) ಮೃತಪಟ್ಟವರು.

ನಕ್ಸಲರು ಭೇಟಿ ಇತ್ತ ಸ್ಥಳದಿಂದ ಅರಣ್ಯ ಪ್ರದೇಶ ಕೋಟೆಗುಡ್ಡೆಗೆ ಸುಮಾರು 6 ಕಿಮೀ ಇದ್ದು, ಇಲ್ಲಿ ಎಎನ್‌ಎಫ್‌ನ ಒಂದು ತಂಡ ಕೂಂಬಿಂಗ್ ನಡೆಸುತ್ತಿರುವ ವೇಳೆ ತಂಡದ ಮುಖ್ಯ ಪೇದೆ ರಂಗಸ್ವಾಮಿ ಸುಮಾರು 4 ಗಂಟೆಯ ವೇಳೆ ಹೃದಯಾಘಾತದಿಂದ ಅಸ್ವಸ್ಥಗೊಂಡು ಕುಸಿದು ಬಿದ್ದರು. ಬಳಿಕ ಪ್ರಥಮ ಚಿಕಿತ್ಸೆಯನ್ನು ಯೋಧರೇ ನಡೆಸಿದರು. ಆ ಹೊತ್ತಿಗೆ ಅವರು ಕೊನೆಯುಸಿರೆಳೆದ್ದಿದ್ದರೆಂದು ತಿಳಿದು ಬಂದಿದೆ.

ಬಳಿಕ ನಕ್ಸಲ್ ನಿಗ್ರಹದಳದ ಕಮಾಡೆಂಟ್‌ಗೆ ತಿಳಿಸಿ, ಮೃತ ಯೋಧನನ್ನು ಕೋಟೆಗುಡ್ಡೆಯ ಮಾಯಿಲ ಕೋಟೆ ಎಂಬ ಸ್ಥಳದಿಂದ ಯೋಧರು ಇಲ್ಲಿನ ಪುಟ್ಟಣ್ಣ ಗೌಡ ಅವರ ಮನೆ ಇದ್ದ ಸ್ಥಳಕ್ಕೆ ಸುಮಾರು 2 ಕಿ.ಮೀ ದೂರ ಹೊತ್ತುಕೊಂಡೇ ದಟ್ಟ ಕಾಡಿನ ಮಧ್ಯೆ ಧಾವಿಸಿದರು. ಅಲ್ಲಿಂದ 5 ಕಿ ಮೀ ಇಳಿಜಾರಿನಲ್ಲಿ ವಾಹನದಲ್ಲಿ ಸಾಗಿಸಿ, ಬಳಿಕ ಮಡಪ್ಪಾಡಿಯಿಂದ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆ ತರಲಾಯಿತು. ಸುಳ್ಯ ಕೇಂದ್ರ ಸ್ಥಾನದಿಂದ ಮಡಪ್ಪಾಡಿಗೆ 35 ಕಿಮೀ ಇದ್ದು, ಶಂಕಿತ ನಕ್ಸಲ್ ಬಂದ ಹಾಡಿಕಲ್ಲಿಗೆ 6ಕಿಮೀ ಇದೆ.

ದ.ಕ., ಕೊಡಗು ಗಡಿಭಾಗದ ಕಿಲಾರ್‌ಮಲೆ ಮೀಸಲು ಅರಣ್ಯದ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಜಯರಾಮ ಎಚ್.ಬಿ ಅವರಿಗೆ ಸೇರಿದ ತೋಟದ ಮನೆಯ ಶೆಡ್‌ನಲ್ಲಿ ಶುಕ್ರವಾರ ಶಂಕಿತ ನಕ್ಸಲರು ಕಂಡು ಬಂದಿದ್ದರು. ಬಳಿಕ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಮಡಿಕೇರಿ-ದ.ಕ ಗಡಿಭಾಗದ ಅರಣ್ಯ ಪ್ರದೇಶವಾದ ಕಡಮಕಲ್ಲು, ಸಂಪಾಜೆ, ಹಾಡಿಕಲ್ಲು ಮತ್ತು ಕೋಟೆಗುಡ್ಡೆಗೆ 4 ತಂಡ ಕೂಂಬಿಂಗ್ ಕಾರ್ಯಾಚರಣೆಗೆ ಇಳಿದಿದ್ದು, ಕೋಟೆಗುಡ್ಡೆ ಕಡೆಗೆ ಹೋದ ತಂಡದಲ್ಲಿ ಯೋಧ ರಂಗಸ್ವಾಮಿ ಇದ್ದರು.

ಕಾರ್ಯಾಚರಣೆಯ ಸ್ಥಳದಟ್ಟ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಅತೀ ದೊಡ್ಡ ಜಿಗಣೆ ಇದ್ದು, ಕಾರ್ಯಾಚರಣೆ ವೇಳೆ ಇದರ ಕಾಟ ಸಾಕಷ್ಟು ಇದ್ದು ಅದು ಕಾರ್ಯಾಚರಣೆಗೆ ಹಾಗೂ ಶವ ಸಾಗಿಸಲು ಅಡ್ಡಿ ಆಗಿತ್ತು. ಘಟನೆ ಸುದ್ದಿ ತಿಳಿದು ನೂರಾರು ಮಂದಿ ಮಡಪ್ಪಾಡಿ ಗ್ರಾಮದಲ್ಲಿ ಸೇರಿದ್ದರು.ಎಎನ್‌ಎಫ್ ಯೋಧ ರಂಗಸ್ವಾಮಿ ಭದ್ರಾವತಿ ಮೂಲದವರಾಗಿದ್ದು, ಕಾರ್ಕಳದಲ್ಲಿ ನಕ್ಸಲ್ ನಿಗ್ರಹದಳದಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು.

ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದು ಕುಟುಂಬ ಸಮೇತ ನೆಲೆಸಿದ್ದರು. ಯೋಧರಿಗೆ ಇಬ್ಬರು ಪುತ್ರಿಯರಿದ್ದು, ಓರ್ವ ಪುತ್ರಿ ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಓರ್ವ ಪುತ್ರಿ, ಪತ್ನಿಯನ್ನು ಅಗಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X