ಕುಡುಪು: ಮನೆಯಿಂದ ಚಿನ್ನಾಭರಣ ಕಳವು
ಮಂಗಳೂರು, ಜೂ.16: ನಗರದ ಕುಡುಪು ನ್ಯೂ ರೈಲ್ವೆ ರಸ್ತೆಯ ನಿವಾಸಿ ಮ್ಯಾಗ್ದಲೀನ್ ಡಿಸಿಲ್ವ ಎಂಬವರ ಮನೆಯಿಂದ ಶುಕ್ರವಾರ ಹಾಡುಹಗಲೇ ಲಕ್ಷಾಂತರ ವೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ. ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
78 ವರ್ಷ ಪ್ರಾಯದ ಮ್ಯಾಗ್ದಲೀನ್ ಡಿಸಿಲ್ವ ತನ್ನ ಮನೆಯಲ್ಲಿ ಒಬ್ಬರೇ ವಾಸವಾಗಿದ್ದಾರೆ. ಶನಿವಾರ ಮಧ್ಯಾಹ್ನ 1:30ಕ್ಕೆ ಮನೆಯಲ್ಲಿದ್ದ ಗೋದ್ರೇಜ್‌ಗೆ ಬೀಗ ಹಾಕಿ ಅದರ ಕೀಯನ್ನು ಮನೆಯ ಒಳಗಡೆಯಲ್ಲಿರುವ ಟೇಬಲ್‌ಗೆ ಹಾಕಿದ್ದ ಪ್ಲಾಸ್ಟಿಕ್‌ನ ಅಡಿಯಲ್ಲಿರಿಸಿ ಮನೆಯ ಬಾಗಿಲಿಗೆ ಬೀಗ ಹಾಕದೆ ಮನೆಯ ಬಳಿ ಇರುವ ತೋಟಕ್ಕೆ ಹೋಗಿದ್ದರು. ಸಂಜೆ ಸುಮಾರು 4 ಗಂಟೆಗೆ ತೋಟದಿಂದ ವಾಪಸ್ ಮನೆಗೆ ಬಂದು ನೋಡಿದಾಗ ಬಾಗಿಲು ಹಾಕಿದ ಸ್ಥಿತಿಯಲ್ಲಿದ್ದು, ಮನೆಯ ಒಳಗಡೆ ಇದ್ದ ಗೋದ್ರೇಜ್‌ನ ಬಾಗಿಲನ್ನು ಕೀ ಬಳಸಿ ತೆರೆದು 3 ಪವನ್ ತೂಕದ 2 ಚಿನ್ನದ ಬಳೆ, ಎರಡುವರೆ ಪವನ್ ತೂಕದ 2 ಚಿನ್ನದ ಬಳೆ, ನಾಲ್ಕು ಪವನ್ ತೂಕದ 1 ಚಿನ್ನದ ಸರ ಮತ್ತು ಅರ್ಧ ಪವನ್ ತೂಕದ 1 ಚಿನ್ನದ ಉಂಗುರ ಹೀಗೆ 10 ಪವನ್ ತೂಕದ ಚಿನ್ನಾಭರಣಗಳು ಹಾಗೂ ನಗದು 1,500 ರೂ.ವನ್ನು ಕಳವು ಮಾಡಿಕೊಂಡು ಹೋಗಿದ್ದು, ಅವುಗಳ ಅಂದಾಜು ಮೌಲ್ಯ 2,01,500 ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರಕರಣ ಪೊಲೀಸರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.





