ಮರ ಕಳ್ಳತನ: ಮೂವರ ವಿರುದ್ಧ ಪ್ರಕರಣ

ಹೆಬ್ರಿ, ಜೂ.15: ಹೆಬ್ರಿ ಸಮೀಪ ಚಾರ ಬಸದಿ ಬಳಿಯ ಸರಕಾರಿ ಜಾಗದಲ್ಲಿ ಜೂ.15ರಂದು ಅಕ್ರಮವಾಗಿ ಮರ ಕಡಿಯುತ್ತಿದ್ದ ಮೂವರ ವಿರುದ್ಧ ಅರಣ್ಯಾ ಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮವಾಗಿ ಮರ ಕಡಿದು ಕಳ್ಳತನ ಮಾಡುತ್ತಿದ್ದ ಮಹೇಶ್ ನಾಯ್ಕ, ಡಿ.ಜಿ. ರಾಘವೇಂದ್ರ ಹಾಗೂ ಪ್ರಶಾಂತ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಈ ಮಾಹಿತಿ ತಿಳಿದು ಸ್ಥಳಕ್ಕೆ ದಾಳಿ ಮಾಡಿದ ಹೆಬ್ರಿ ವಲಯ ಅರಣ್ಯಾಧಿಕಾರಿಗಳ ತಂಡ ಮರಗಳ್ಳತನವನ್ನು ಪತ್ತೆ ಹಚ್ಚಿ ಸುಮಾರು 40 ಸಾವಿರ ವೌಲ್ಯದ ಹಲಸಿನ ಮರವನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
Next Story





