ರೊನಾಲ್ಡ್ ಹ್ಯಾಟ್ರಿಕ್ ಗೋಲ್...
ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್‌ನಲ್ಲಿ ನೀಡಿದ ಶ್ರೇಷ್ಠ ಪ್ರದರ್ಶನದ ನೆರವಿನಿಂದ ಪೋರ್ಚುಗಲ್ ತಂಡ ಸ್ಪೇನ್ ತಂಡದ ವಿರುದ್ಧ 3-3 ರಿಂದ ಡ್ರಾ ಸಾಧಿಸಲು ಯಶಸ್ವಿಯಾಗಿದೆ. ಇಲ್ಲಿನ ಫಿಶ್ಟ್ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಪೋರ್ಚುಗಲ್ ಪರ ಹ್ಯಾಟ್ರಿಕ್ ಗೋಲು ಬಾರಿಸಿದ ರೊನಾಲ್ಡೊ ಸ್ಪೇನ್ ಕೈಯಿಂದ ಗೆಲುವು ಕಸಿದುಕೊಂಡರು.
Next Story





