ಶಾರ್ಜಾದಲ್ಲಿ ವಾಹನ ಅಪಘಾತ: ಕಾಸರಗೋಡಿನ ಯುವಕ ಮೃತ್ಯು

ಕಾಸರಗೋಡು: ಶಾರ್ಜಾದಲ್ಲಿ ನಡೆದ ವಾಹನ ಅಪಘಾತದಲ್ಲಿ ಕಾಸರಗೋಡು ನಿವಾಸಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಕಾಸರಗೋಡು ತಳಂಗರೆಯ ಹಾತೀಬ್ ಹಾರಿಸ್(23) ಮೃತಪಟ್ಟ ಯುವಕ.
ಸ್ನೇಹಿತರ ಜೊತೆ ಕಾರಿನಲ್ಲಿ ತೆರಳುತ್ತಿದ್ದಾಗ ಟಯರ್ ಸ್ಫೋಟಗೊಂಡು ಕಾರು ಮಗುಚಿ ಬಿದ್ದು ಈ ದುರ್ಘಟನೆ ನಡೆದಿದೆ. ಹಾತೀಬ್ ಹಾರಿಸ್ ಅವರು ಶಾರ್ಜಾದ ರಿಯಲ್ ಎಸ್ಟೇಟ್ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಒಂದು ವರ್ಷದ ಹಿಂದೆಯಷ್ಟೇ ಶಾರ್ಜಾಕ್ಕೆ ತೆರಳಿದ್ದರು.
ಕಾರಲ್ಲಿದ್ದ ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
Next Story